×
Ad

ಮಣಿಪುರ: ಕೆಎಲ್‌ಎ ನಾಯಕನ ಹತ್ಯೆ

Update: 2017-06-08 20:32 IST

ಇಂಫಾಲ್,ಜೂ.8: ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಗುರುವಾರ ಅಪರಿಚಿತ ವ್ಯಕ್ತಿಗಳು ಕುಕಿ ವಿಮೋಚನಾ ಸೇನೆ(ಕೆಎಲ್‌ಎ)ಯ ಸ್ವಘೋಷಿತ ‘ಕಮಾಂಡರ್ ಇನ್ ಚೀಫ್’ ಲೆಟ್ಕೊಪಾವೊ ಖಂಗ್ಸಾಯಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಬೆಳಿಗ್ಗೆ 9:30ರ ಸುಮಾರಿಗೆ ಸೈಕುಲ್ ಬಝಾರ್‌ನಲ್ಲಿರುವ ನಿವಾಸದಲ್ಲಿ ಖಂಗ್ಸಾಯಿ (43)ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.
ಸದ್ಯ ತಮ್ಮ ಕಾರ್ಯಾಚರಣೆಗಳನ್ನು ಅಮಾನತುಗೊಳಿಸಿರುವ 20ಕ್ಕೂ ಅಧಿಕ ಕುಕಿ ಉಗ್ರಗಾಮಿ ಸಂಘಟನೆಗಳಲ್ಲಿ ಕೆಎಲ್‌ಎ ಒಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News