×
Ad

ಮುಂದಿನ ರಾಷ್ಟ್ರಪತಿ ‘ಹಿಂದುತ್ವ ರಬ್ಬರ್ ಸ್ಟ್ಯಾಂಪ್’ ಆಗಿರಲಿ : ಶಿವಸೇನೆ

Update: 2017-06-09 15:24 IST

ಮುಂಬೈ,ಜೂ.9: ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಅವರನ್ನು ಮುಂದಿನ ರಾಷ್ಟ್ರಪತಿಯನ್ನಾಗಿ ಮಾಡಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಿರುವ ಶಿವಸೇನೆಯು, ‘ಹಿಂದುತ್ವ ರಬ್ಬರ್ ಸ್ಟ್ಯಾಂಪ್’ ಅನ್ನು ರಾಷ್ಟ್ರಪತಿ ಭವನದಲ್ಲಿ ಪ್ರತಿಷ್ಠಾಪಿಸಬೇಕೆಂದು ಶುಕ್ರವಾರ ಹೇಳಿದೆ.

‘ಹಿಂದು ರಾಷ್ಟ್ರ ’ವೆಂಬ ಮುದ್ರೆಯನ್ನೊತ್ತುವ ಮತ್ತು ರಾಮ ಮಂದಿರ ಹಾಗು 370ನೇ ವಿಧಿಯಂತಹ ವಿವಾದಗಳನ್ನು ಬಗೆಹರಿಸಬಲ್ಲ ವ್ಯಕ್ತಿಯೋರ್ವರು ಇಂದು ದೇಶಕ್ಕೆ ಅಗತ್ಯವಾಗಿದ್ದಾರೆ ಎಂದು ಅದು ತಿಳಿಸಿದೆ.

ಈವರೆಗೆ ಜಾತ್ಯತೀತ ಹಿನ್ನೆಲೆಯ ವ್ಯಕ್ತಿಗಳು ರಾಷ್ಟ್ರಪತಿಗಳಾಗಿದ್ದಾರೆ. ಈಗ ರಾಮ ಮಂದಿರ, ಏಕರೂಪ ನಾಗರಿಕ ಸಂಹಿತೆ ಮತ್ತು 370ನೇ ವಿಧಿಯಂತಹ ವಿವಾದಗಳನ್ನು ಬಗೆಹರಿಸಲು ಹಿಂದುತ್ವ ರಬ್ಬರ್ ಸ್ಟಾಂಪ್ ರಾಷ್ಟ್ರಪತಿಯಾಗುವುದು ಅಗತ್ಯವಾಗಿದೆ ಎಂದು ಶಿವಸೇನೆಯು ತನ್ನ ಮುಖವಾಣಿ ‘ಸಾಮನಾ’ದ ಶುಕ್ರವಾರದ ಸಂಚಿಕೆಯ ಸಂಪಾದಕೀಯ ಲೇಖನದಲ್ಲಿ ಬರೆದಿದೆ.

ಆರೆಸ್ಸೆಸ್ ಮುಖ್ಯಸ್ಥರು ರಾಷ್ಟ್ರಪತಿ ಸ್ಥಾನಕ್ಕೆ ತನ್ನ ಆಯ್ಕೆಯಾಗಿದ್ದಾರೆ ಎಂದು ಸೇನೆ ಪದೇಪದೇ ಹೇಳುತ್ತಲೇ ಬಂದಿದೆ. ಆದರೆ ರಾಷ್ಟ್ರಪತಿ ಹುದ್ದೆಯ ಬಗ್ಗೆ ತನಗೆ ಆಸಕ್ತಿಯಿಲ್ಲ ಎಂದು ಭಾಗವತ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News