×
Ad

ಅಪೂರ್ಣ ರಾಷ್ಟ್ರಗೀತೆ : ಗೋವಾದಲ್ಲಿ ಪಠ್ಯಪುಸ್ತಕ ಮರುಮುದ್ರಣ

Update: 2017-06-09 18:17 IST

ಪಣಜಿ, ಜೂ.9: ಗೋವಾದಲ್ಲಿ ದ್ವಿತೀಯ ತರಗತಿಯ ಮರಾಠಿ ಪಠ್ಯಪುಸ್ತಕದಲ್ಲಿ ರಾಷ್ಟ್ರಗೀತೆಯ ಕೆಲವು ಸಾಲನ್ನು ಬಿಟ್ಟು ಮುದ್ರಿತಗೊಂಡ ಕಾರಣ ಪಠ್ಯಪುಸ್ತಕಗಳನ್ನು ಮರುಮುದ್ರಿಸಲು ರಾಜ್ಯದ ಶಿಕ್ಷಣ ಇಲಾಖೆ ನಿರ್ಧರಿಸಿದೆ.

   ಪಠ್ಯದಲ್ಲಿ ರಾಷ್ಟ್ರಗೀತೆಯ ಕೆಲವು ಸಾಲು ಇಲ್ಲದ ಕಾರಣ ರಾಷ್ಟ್ರಗೀತೆ ಅಪೂರ್ಣವಾಗಿದೆ. ಆದರೆ ಇಡೀ ಪುಸ್ತಕವನ್ನೇ ಮರುಮುದ್ರಿಸುವುದು ಕಷ್ಟ. ಆದ್ದರಿಂದ ಪುಸ್ತಕದ ಒಂದು ಪುಟದ 13,000 ಪ್ರತಿಯನ್ನು ಮರುಮುದ್ರಿಸಿ ಎಲ್ಲಾ ಶಾಲೆಗಳಿಗೆ ಹಂಚಲು ನಿರ್ಧರಿಸಲಾಗಿದೆ ಎಂದು ಗೋವಾದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಪಠ್ಯಪುಸ್ತಕದಲ್ಲಿದ್ದ ದೋಷವನ್ನು ಇಲಾಖೆಯ ಗಮನಕ್ಕೆ ತಂದಿದೆ. ಈ ಪ್ರಕರಣದ ಹೊಣೆಗಾರರನ್ನು ಸರಕಾರ ಗುರುತಿಸಿ ಶಿಕ್ಷಿಸಬೇಕು ಎಂದು ಗೋವಾ ಕಾಂಗ್ರೆಸ್ ವಕ್ತಾರ ಸುನಿಲ್ ಕವತಂಕಾರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News