ಮಂದಸೌರ್ ನಲ್ಲಿ ಮತ್ತೊಬ್ಬ ರೈತ ಮೃತ್ಯು: ಗ್ರಾಮಸ್ಥರಿಂದ ಪೊಲೀಸ್ ದೌರ್ಜನ್ಯದ ಆರೋಪ
Update: 2017-06-09 18:22 IST
ಭೋಪಾಲ್, ಜೂ.9: ಗಲಭೆಪೀಡಿತ ಮಂದಸೌರ್ ಜಿಲ್ಲೆಯಲ್ಲಿ 26 ವರ್ಷದ ರೈತನೋರ್ವ ಮೃತಪಟ್ಟಿದ್ದು, ಪೊಲೀಸರ ದೌರ್ಜನ್ಯವೇ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಿನ್ನೆ ರಾತ್ರಿ ಇಂದೋರ್ ನ ಎಂ.ವೈ. ಆಸ್ಪತ್ರೆಗೆ ರೈತ ಘನಶ್ಯಾಮ್ ಧಕಡ್ ರನ್ನು ದಾಖಲಿಸಲಾಗಿತ್ತು. ಆದರೆ ಆತ ಮೃತಪಟ್ಟಿದ್ದು. ದೇಹದಲ್ಲಿ ಗಾಯದ ಗುರುತುಗಳಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈತ ಘನಶ್ಯಾಮ್ ಧಕಡ್ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅಡ್ಡಗಟ್ಟಿದ ಪೊಲೀಸರು ಆತನ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಆತನನ್ನು ಇಂದೋರ್ ನ ಎಂ.ವೈ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದರಿಂದಾಗಿ ಮಂದಸೌರ್ ಜಿಲ್ಲೆಯಲ್ಲಿ ಮೃತಪಟ್ಟ ರೈತರ ಸಂಖ್ಯೆ ಆರಕ್ಕೇರಿದೆ. ಪೊಲೀಸರ ಗುಂಡೇಟಿಗೆ ರೈತರು ಬಲಿಯಾದ ನಂತರ ಜಿಲ್ಲೆಯಲ್ಲಿ ಹಿಂಸಾಚಾರ ಆರಂಭಗೊಂಡಿತ್ತು.