ಇಂಧನ ಬೆಲೆಯಲ್ಲಿ ಪ್ರತಿದಿನ ಬದಲಾವಣೆ ಜನರಿಗೆ ಕಿರಿಕಿರಿ: ಪೆಟ್ರೋಲ್‌ಬಂಕ್ ಮಾಲಕರು

Update: 2017-06-10 12:55 GMT

ಕೊಚ್ಚಿ,ಜೂ. 10: ಇಂಧನ ಬೆಲೆಯಲ್ಲಿ ಪ್ರತಿದಿನ ಬದಲಾವಣೆ ಮಾಡುವ ಪೆಟ್ರೋಲಿಯಂ ಕಂಪೆನಿಗಳ ನಿರ್ಧಾರ ಅಗತ್ಯ ಪೂರ್ವಸಿದ್ಧತೆಯನ್ನು ಹೊಂದಿಲ್ಲ ಎಂದು ಪೆಟ್ರೋಲ್ ಬಂಕ್ ಮಾಲಕರ ಸಂಘಟನೆ ಹೇಳಿದೆ. ಇಂತಹ ಬದಲಾವಣೆಗಳು ಬಂಕ್ ಮಾಲಕರಿಗೂ ಸಾರ್ವಜನಿಕರಿಗೂ ಕಿರಿಕಿರಿಯಾಗಿದೆ ಎಂದು ಪೆಟ್ರೋಲ್ ವ್ಯಾಪಾರಿಗಳ ಆಲ್ ಕೇರಳ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಅಭಿಪ್ರಾಯ ವ್ಯಕ್ತಪಡಿಸಿದೆ.

 ದೇಶದಾದ್ಯಂತ ಜೂನ್ 16ರಿಂದಪೆಟ್ರೋಲ್ ಬೆಲೆಯನ್ನು ಪ್ರತಿದಿನ ಬದಲಾಯಿಸುವುದು ಪೆಟ್ರೋಲ್ ಕಂಪೆನಿಯ ನಿರ್ಧಾರವಾಗಿದೆ. ಈಗ ಎರಡು ವಾರಕ್ಕೊಮ್ಮೆ ಇಂಧನದರವನ್ನು ನವೀಕರಿಸಲಾಗುತ್ತದೆ. ಕೇರಳದಲ್ಲಿಶೇ. 80ರಷ್ಟು ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಬೆಲೆಯನ್ನು ಪ್ರತಿದಿನ ನವೀಕರಿಸುವ ವ್ಯವಸ್ಥೆ ಇಲ್ಲ ಎಂದು ಬಂಕ್ ಮಾಲಕರ ಸಂಘಟನೆಯ ಅಧ್ಯಕ್ಷ ಮೇಲೊತ್ ರಾಧಾಕೃಷ್ಣನ್‌ರು ಹೇಳಿದ್ದಾರೆ.

 ಐದುವರ್ಷಗಳಲ್ಲಿ ಆಟೊಮೇಶನ್ ವ್ಯವಸ್ಥೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಈ ವ್ಯವಸ್ಥೆ ಶೇ.20ರಷ್ಟು ಬಂಕ್‌ಗಳಲ್ಲಿ ಮಾತ್ರ ಇದೆ.ಎಂದು ಅವರು ಹೇಳಿದರು. ಆದ್ದರಿಂದ ಎಲ್ಲ ದಿವಸಗಳು ದರ ಬದಲಾವಣೆ ಆಗುವುದಾದರೆ ಹೆಚ್ಚು ಸ್ಟಾಕ್ ಇರಿಸಿಕೊಳ್ಳುವುದು ಕಷ್ಟದವಿಚಾರವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪೆಟ್ರೋಲ್ ಬಂಕ್ ಮಾಲಕರು ಹೇಳಿದ್ದಾರೆ.

ಅದೇವೇಳೆ ಆಟೊಮೇಶನ್ ವ್ಯವಸ್ಥೆ ಜಾರಿಗೊಳಿಸುವುದನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇವೆ. ಮತ್ತು ಇದನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರಬೇಕೆನ್ನುವುದು ನಮ್ಮ ಆಗ್ರಹವಾಗಿದೆ ಎಂದು ಆಲ್ ಕೇರಳ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News