ವಿಶ್ವದ ಮೊತ್ತ ಮೊದಲ ಸಿನೆಮಾ ಸ್ಟುಡಿಯೋ

Update: 2017-06-10 18:13 GMT

1982ರಲ್ಲಿ ವಿಶ್ವದ ಮೊತ್ತ ಮೊದಲ ಸಿನೆಮಾ ಸ್ಟುಡಿಯೋ ಅಸ್ತಿತ್ವಕ್ಕೆ ಬಂದಿರುವುದು ಜೂನ್ 11ರಂದು. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ 1892ರಲ್ಲಿ ‘ದಿ ಲೈಮ್ ಲೈಟ್ ಡಿಪಾರ್ಟ್‌ಮೆಂಟ್’ ಎಂಬ ಹೆಸರಿನಲ್ಲಿ ಈ ಸ್ಟುಡಿಯೋ ಕಾರ್ಯಾಚರಣೆಗೈಯತೊಡಗಿತು. ‘ಸೋಲ್ಜಿಯರ್ ಆಫ್ ದ ಕ್ರಾಸ್’ ಈ ಸ್ಟುಡಿಯೋದ ಅಧಿಕೃತ ಸಿನೆಮಾ ಎಂದು ಗುರುತಿಸಲಾಗಿದೆ. 2002 ಜೂನ್ 11ರಂದು ಅಮೆರಿಕದ ಕಾಂಗ್ರೆಸ್ ದೂರವಾಣಿಯನ್ನು ಮೊತ್ತಮೊದಲು ಸಂಶೋಧಿಸಿರುವುದು ಆಂಟೋನಿಯೋ ಮ್ಯೂಸಿ ಎನ್ನುವುದನ್ನು ಮಾನ್ಯತೆ ಮಾಡಿತು. ಆಲ್‌ಫ್ರೆಡ್ ಹಿಚ್‌ಕಾಕ್ ಅವರ ಖ್ಯಾತ ಚಿತ್ರ ‘ಕೇಸ್ ಆಫ್ ಜೊನಾಥನ್ ಡ್ರೂ’ ಬಿಡುಗಡೆಗೊಂಡಿರುವುದು 1928 ಜೂ. 11ರಂದು. ಯುನೈಟೆಡ್ ಕಿಂಗ್‌ಡಂನ ಪ್ರಧಾನಿಯಾಗಿ ಮಾರ್ಗರೇಟ್ ಥ್ಯಾಚರ್ ಅವರು 1987ರಲ್ಲಿ ಪ್ರಧಾನಿಯಾಗಿ ಮರು ಆಯ್ಕೆಯಾದ ದಿನ. ಅತ್ಯಂತ ಸುದೀರ್ಘ ಕಾಲ ಯುನೈಟೆಡ್ ಕಿಂಗ್‌ಡಂನ್ನು ಆಳಿದ ಖ್ಯಾತಿ ಈಕೆಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಅಂತ್ಯ ಸಂಸ್ಕಾರ ನಡೆದಿರುವುದು 2004 ಜೂ. 11ರಂದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News