ನಟ ಯೋಗಿ ಅದ್ಧೂರಿ ನಿಶ್ಚಿತಾರ್ಥ: ನ.2ರಂದು ವಿವಾಹ

Update: 2017-06-11 06:25 GMT

ಕೆಲವು ದಿನಗಳ ಹಿಂದಷ್ಟೇ ಅಮೂಲ್ಯ ಕಲ್ಯಾಣೋತ್ಸವ ಕನ್ನಡ ಚಿತ್ರರಂಗದ ಗಮನ ಸೆಳೆದಿತ್ತು.ಇದೀಗ ಮತ್ತೊಬ್ಬ ಸ್ಟಾರ್ ನಟನ ಮದುವೆಯ ಸಡಗರ.  ಲೂಸ್ ಮಾದ ಖ್ಯಾತಿಯ ಯೋಗಿ ಸದ್ಯವೇ ಚೆಲುವೆಯೊಬ್ಬಳನ್ನು ವಿವಾಹವಾಗಲಿದ್ದಾರೆ. ಅವರು ಹಿಡಿಯುವ ಚೆಲುವೆ ಬೇರಾರು ಅಲ್ಲ ಬಾಲ್ಯದ ಗೆಳತಿ ಸಾಹಿತ್ಯ ಅರಸ್.
ಯೋಗಿ-ಸಾಹಿತ್ಯ ಅವರ ವಿವಾಹ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ಇಂದು ಅದ್ಧೂರಿಯಾಗಿ ನೆರವೇರಿತು. ಬೆಂಗಳೂರಿನ ಯಡಿಯೂರ್ ಬಳಿ ವಧು ಸಾಹಿತ್ಯ ಅವರ ನಿವಾಸದಲ್ಲಿ ನೆರವೇರಿದ ಈ ವಿವಾಹ ನಿಶ್ಚಿತಾರ್ಥ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರು ಭಾಗಿಯಾದರು. 

ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರವೊಂದರಲ್ಲಿ ಎಂಟ್ರಿಕೊಟ್ಟ ಯೋಗಿ ಬರುಬರುತ್ತಾ ಹೀರೋ ಆಗಿ ಮಿಂಚುತ್ತಿದ್ದಾರೆ. ಅನೇಕ ಚಿತ್ರಗಳಲ್ಲಿ ಅಭಿನಯಿಸಿರುವ ಈ ನಟ ತನ್ನ ಬಾಲ್ಯದ ಗೆಳತಿಯೊಂದಿಗಿನ ಲವ್ವಿ-ಡವ್ವಿ ವಿಚಾರ ಅಷ್ಟೇನೋ ಬಹಿರಂಗವಾಗಿರಲಿಲ್ಲ. ಇದೀಗ ಯೋಗಿ-ಸಾಹಿತ್ಯ ನಿಶ್ಛಿತಾರ್ಥ ನೆರವೇರಿದ್ದು, ನವೆಂಬರ್ 2ರಂದು ಬೆಂಗಳೂರಿನಲ್ಲಿ ಈ ಜೋಡಿ ಹಸಮಾನೇ ಏರಲಿದೆ. 

ನಿಶ್ಚಿತಾರ್ಥ ಸಮಾರಂಭಕ್ಕೆ ತೀರಾ ಹತ್ತಿರದ ಸಂಬಂಧಿಕರನ್ನು ಹೊರತುಪಡಿಸಿ ಬೇರೆಯವರನ್ನು ಆಹ್ವಾನಿಸಿರಲಿಲ್ಲ. ಆದರೆ ನವೆಂಬರ್ 2ರ ಅದ್ದೂರಿ ವಿವಾಹ ಸಮಾರಂಭಕ್ಕೆ ಕನ್ನಡ ಚಿತ್ರೋದ್ಯಮದ ಗಣ್ಯರನ್ನು ಆಹ್ವಾನಿಸಲಾಗುವುದು ಎಂದು ಯೋಗಿ ಕುಟುಂಬದವರು ಹೇಳಿಕೊಂಡಿದ್ದಾರೆ.

ಸುಮಾರು 10 ವರ್ಷಗಳಿಂದ ಯೋಗಿ- ಸಾಹಿತ್ಯ ಪ್ರೇಮ ಪಯಣ ಸಾಗುತ್ತಾ ಬಂದಿದೆ. ಇದೀಗ ಶಾಲಾ ಕಾಲದ ಭೇಟಿ ನಂತರದ ಸ್ನೇಹ ಪ್ರೀತಿ ನವೆಂಬರ್ 2ರಂದು ಮದುವೆಯಾಗುವ ಮೂಲಕ ಹೊಸ ಬದುಕಿನ ಕಥೆಗೆ ಸಾಕ್ಷಿಯಾಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News