ಗದ್ಧಾಫಿ ಪುತ್ರನ ಬಿಡುಗಡೆ
Update: 2017-06-11 12:59 IST
ಟ್ರಿಪೋಲಿ, ಜೂ 11: ಲಿಬಿಯದ ಮಾಜಿ ಸರ್ವಾಧಿಕಾರಿ ಮುಹಮ್ಮರ್ ಗದ್ಧಾಫಿ ಪುತ್ರ ಸೈಫುಲ್ ಇಸ್ಲಾಮ್‌ರನ್ನು ಬಂಡುಕೋರರು ಬಿಡುಗಡೆಗೊಳಿಸಿದ್ದಾರೆ. ಗದ್ಧಾಫಿ ಪುತ್ರ ಸೈಫ್‌ರನ್ನು 2011 ನವೆಂಬರ್‌ನಿಂದ ಬಂಡುಕೋರರು ಕೈದಿಯಾಗಿಟ್ಟುಕೊಂಡಿದ್ದರು. ಬಂಡುಕೋರರು ಸೈಫ್‌ರನ್ನು ಬಿಡುಗಡೆಗೊಳಿಸುವ ಸುದ್ದಿಯನ್ನು ಫೇಸ್‌ಬುಕ್ ಮೂಲಕಬಹಿರಂಗಪಡಿಸಿದ್ದಾರೆ.
ಲಿಬಿಯದ ಸಿನ್ಹಾರ್ ನಗರದ ನಿಯಂತ್ರಣವನ್ನು ಹೊಂದಿದ್ದ ಅಬೂಬಕರ್ ಅಲ್ ಸಾದಿಕ್ ಬ್ರಿಗೇಡ್ ಎನ್ನುವ ಬಂಡುಕೋರ ಗುಂಪು ಸೈಫ್‌ರನ್ನು ಬಂಧನದಲ್ಲಿರಿಸಿತ್ತು. ಶುಕ್ರವಾರಸಂಜೆ ಬಂಡುಕೋರರು ಸೈಫ್‌ರನ್ನು ಬಿಡುಗಡೆಗೊಳಿಸಿದೆ. ಗದ್ಧಾಫಿ ಯ ಮರಣದ ಬಳಿಕವೂ ಲಿಬಿಯ ಸರಕಾರ ಮತ್ತು ಬಂಡುಕೋರರ ನಡುವೆ ಹಲವು ಸ್ಥಳಗಳಲ್ಲಿ ಘರ್ಷಣೆ ನಡೆಯುತ್ತಿದೆ.