ಟ್ಯೂಬ್‌ಲೈಟ್ ಬಳಿಕ ರೇಸ್3 ?

Update: 2017-06-11 08:59 GMT

ಸಲ್ಮಾನ್ ಖಾನ್ ನಟಿಸಿದ ಪ್ರತಿಯೊಂದು ಚಿತ್ರವೂ ಬಿಡುಗಡೆ ಗೊಂಡ ಬೆನ್ನಲ್ಲೇ ಅವರ ಹಿಂದಿನ ಚಿತ್ರಗಳ ದಾಖಲೆಯನ್ನು ಮುರಿಯುವುದು ಸಾಮಾನ್ಯವಾಗಿ ಬಿಟ್ಟಿದೆ. ಈದ್ ವೇಳೆ ಬಿಡುಗಡೆ ಯಾಗಲಿರುವ ಸಲ್ಮಾನ್ ಅಭಿನಯದ ‘ಟ್ಯೂಬ್‌ಲೈಟ್’ ಚಿತ್ರದ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. 1962 ಭಾರತ-ಚೀನಾ ಯುದ್ಧದ ಹಿನ್ನೆಲೆಯ ಪ್ರೇಮಕಥೆಯನ್ನು ಹೇಳುವ ಈ ಚಿತ್ರ ಬಾಲಿವುಡ್‌ನಲ್ಲಿ ಮತ್ತೊಂದು ಹೊಸ ದಾಖಲೆ ನಿರ್ಮಿಸಲಿದೆಯೆಂದು ಈಗಾಗಲೇ ಕೆಲವು ಬಾಲಿವುಡ್ ಮಂದಿ ಭವಿಷ್ಯ ನುಡಿದಿದ್ದಾರೆ.

ಸಲ್ಮಾನ್ ಜೊತೆ ‘ಏಕ್ ಥಾ ಟೈಗರ್’ ಹಾಗೂ ‘ಬಜರಂಗಿ ಭಾಯ್‌ಜಾನ್’ನಂತಹ ಭರ್ಜರಿ ಹಿಟ್ ಚಿತ್ರಗಳನ್ನು ನೀಡಿರುವ ಕಬೀರ್ ಖಾನ್, ‘ಟ್ಯೂಬ್‌ಲೈಟ್’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯಾಗಿ ಚೀನಿ ನಟಿ ಝು ಝು ಅಭಿನಯಿಸಿರುವುದು ‘ಟ್ಯೂಬ್‌ಲೈಟ್’ನ ಇನ್ನೊಂದು ಹೈಲೈಟ್. ಸಲ್ಮಾನ್ ಸಹೋದರ ಸೊಹೈಲ್ ಕೂಡಾ ನಟಿಸಿದ್ದಾರೆ. ಈ ಮಧ್ಯೆ ಟ್ಯೂಬ್‌ಲೈಟ್ ಬಿಡುಗಡೆ ಸನ್ನಿಹಿತವಾಗುತ್ತಿರುವಂತೆಯೇ, ಸಲ್ಮಾನ್ ಮುಂದಿನ ಚಿತ್ರ ಯಾವುದೆಂಬ ಕುತೂಹಲ ಅಭಿಮಾನಿಗಳನ್ನು ಕಾಡ ತೊಡಗಿದೆ.

ಸಲ್ಮಾನ್ ಅಭಿನಯ ದಲ್ಲಿ ‘ದಬಾಂಗ್ 3’ , ಶೀಘ್ರದಲ್ಲೇ ಸೆಟ್ಟೇರಲಿದೆ ಯೆಂದು ಅವರ ಸಹೋದರ, ನಿರ್ಮಾಪಕ ಅರ್ಬಾಜ್ ಹೇಳಿದ್ದಾರೆ. ಆದಾಗ್ಯೂ ಬಾಲಿವುಡ್‌ನಲ್ಲಿ ಹರಿದಾಡುವ ವದಂತಿಗಳ ಪ್ರಕಾರ ಸಲ್ಮಾನ್ ‘ರೇಸ್3’ನಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸಲು ಆಸಕ್ತಿ ಹೊಂದಿದ್ದಾರಂತೆ. ಅದೇನಿದ್ದರೂ ‘ದಂಬಾಗ್ 3’ ಅಥವಾ ‘ರೇಸ್ 3’ ಪೈಕಿ ಸಲ್ಮಾನ್, ಯಾವುದಕ್ಕೆ ಗ್ರೀನ್ ಸಿಗ್ನಲ್ ತೋರಿಸಲಿದ್ದಾರೆಂಬುದು ಟ್ಯೂಬ್‌ಲೈಟ್ ಬಿಡುಗಡೆಯ ಬಳಿಕವೇ ಖಚಿತವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News