ಐಐಟಿ ಎಂಟ್ರೆನ್ಸ್ ಎಕ್ಸಾಮಿನೇಷನ್ (ಜೆಇಇ) ಎಡ್ವಾನ್ಸಿಡ್ ಫಲಿತಾಂಶ ಪ್ರಕಟ; ಸರ್ವೇಶ್ ಮೆಹ್ತಾನಿ ಗೆ ಪ್ರಥಮ ರ‍್ಯಾಂಕ್
ಹೊಸದಿಲ್ಲಿ, ಜೂ.11: ಐಐಟಿ ಎಂಟ್ರೆನ್ಸ್ ಎಕ್ಸಾಮಿನೇಷನ್ (ಜೆಇಇ) ಎಡ್ವಾನ್ಸಿಡ್ ಪರೀಕ್ಷೆಯಲ್ಲಿ ಹರ‍್ಯಾಣದ ಪಂಚಕುಳದ ಸರ್ವೇಶ್ ಮೆಹ್ತಾನಿ ಅಖಿಲಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ.
ದೇಶದಲ್ಲಿರುವ 23 ಐಐಟಿ ಮತ್ತು ಐಎಸ್‌ಎಂ ಪ್ರವೇಶಕ್ಕೆ ಐಐಟಿ ಎಂಟ್ರೆನ್ಸ್ ಎಕ್ಸಾಮಿನೇಷನ್ (ಜೆಇಇ) ಎಡ್ವಾನ್ಸಿಡ್ ಪರೀಕ್ಷೆ ನಡೆಸಲಾಗುತ್ತಿದೆ.
ಐಐಟಿ ಎಂಟ್ರೆನ್ಸ್ ಎಕ್ಸಾಮಿನೇಷನ್ (ಜೆಇಇ) ಎಡ್ವಾನ್ಸಿಡ್ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ.ಕಳೆದ ಮೇ 21ರಂದು ನಡೆದ ಪರೀಕ್ಷೆಯಲ್ಲಿ 1.7ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರದಿದ್ದರು.
ಪಂಚಕುಳದ ಸರ್ವೆಶ್ ಮೆಹ್ತಾನಿ ಅಖಿಲಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್ ಗಳಿಸಿದರು. ಕೋಲ್ಕತಾದ ದೇವಾದಿತ್ಯ ಪ್ರಾಮಾಣಿಕ್ ಅವರು ಪೂರ್ವ ವಲಯದಲ್ಲಿ ಮೊದಲ ಸ್ಥಾನ ಪಡೆದರು. ದೇವಾದಿತ್ಯ ಅಖಿಲ ಭಾರತ ಮಟ್ಟದಲ್ಲಿ 38ನೆ ರ‍್ಯಾಂಕ್ ಗಳಿಸಿದರು.ಹರ‍್ಯಾಣದ ಮಹೇಂದ್ರಗಡದ ಸೂರಜ್ ಯಾದವ್ 5ನೆ ಮತ್ತು ಚಂಡಿಗಢದ ರಚಿತ್ ಬನ್ಸಾಲ್ ಐಐಟಿ ಎಂಟ್ರೆನ್ಸ್ ಎಕ್ಸಾಮಿನೇಷನ್ (ಜೆಇಇ) ಎಡ್ವಾನ್ಸಿಡ್ ನಲ್ಲಿ 9ನೆ ರ‍್ಯಾಂಕ್ ಗಳಿಸಿದರು.