80 ವರ್ಷದ ಅಜ್ಜಿಗೆ ಪೋಲಿಸರಿಂದ ಹಲ್ಲೆ
Update: 2017-06-11 16:33 IST
ಹೊಸದಿಲ್ಲಿ,ಜೂ. 11: 80ವರ್ಷದ ವೃದ್ಧ ಮಹಿಳೆಯೊಬ್ಬರಿಗೆ ಪೊಲೀಸರು ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಸಿಹೋರ್ ಎಂಬಲ್ಲಿ ನಡೆದಿದೆ. ಪ್ರತಿಭಟನಾ ನಿರತ ರೈತರನ್ನು ಓಡಿಸುತ್ತಾ ಬಂದ ಪೊಲೀಸರು ಕಮಲಾ ಬಾಯಿ ಎನ್ನುವ ಹಿರಿಯ ಮಹಿಳೆಗೆ ಹಲ್ಲೆ ನಡೆಸಿದ್ದಾರೆ. ಪ್ರತಿಭಟನಾಕಾರರು ಅವರ ಮನೆಗೆ ನುಗ್ಗಿ ಹಿಂಬಾಗಿಲಿನಿಂದ ಓಡಿ ಹೋಗಿದ್ದರು. ಅವರನ್ನುಹಿಂಬಾಲಿಸುತ್ತಾ ಬಂದ ಪೊಲೀಸರು ಕಮಲಾಬಾಯಿ ಮನೆಗೆ ನುಗ್ಗಿ ಎದುರುಸಿಕ್ಕ ಹಿರಿಯ ಜೀವಕ್ಕೆ ಹೊಡೆದಿದ್ದಾರೆ. ಈ ಘಟನೆಯ ನಂತರ ಸ್ಥಳೀಯರು ಆಕ್ರೋಶಿತರಾಗಿದ್ದಾರೆ. ಪ್ರತಿಭಟನೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಕಮಲಾಬಾಯಿ ಹೇಳಿದ್ದಾರೆ. ಶನಿವಾರ ಮುಖ್ಯಮಂತ್ರಿಯನ್ನು ಭೇಟಿಯಾಗಲು ಕಮಲಾಬಾಯಿ ತೆರಳಿದ್ದರು. ಆದರೆ ಅಧಿಕಾರಿಯ ಭೇಟಿಗೆ ಅವಕಾಶವನ್ನು ನೀಡಿಲ್ಲ.