ರೈತರ ಹೋರಾಟಕ್ಕೆ ಸಂದ ಜಯ: ಮಹಾರಾಷ್ಟ್ರ ಸರಕಾರದಿಂದ ಸಂಪೂರ್ಣ ಸಾಲಮನ್ನಾ ಘೋಷಣೆ

Update: 2017-06-11 12:29 GMT

ಮುಂಬೈ, ಜೂ.11: ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಮಹಾರಾಷ್ಟ್ರ ಸರಕಾರ ಘೋಷಿಸಿದ್ದು, ಈ ಬಗೆಗಿನ ಮಾನದಂಡಗಳನ್ನು ನಿರ್ಧರಿಸಲು ಶೀಘ್ರವೇ ಸಮಿತಿಯೊಂದನ್ನು ರಚಿಸಲಿದೆ.

ಜೂ.1ರಂದು ಸಾಲಮನ್ನಾ ಹಾಗೂ ಇತರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮಹಾರಾಷ್ಟ್ರದಲ್ಲಿ ರೈತರು ಸರಕಾರದ ವಿರುದ್ಧ ಭಾರೀ ಪ್ರತಿಭಟನೆಯನ್ನು ಆರಂಭಿಸಿದ್ದರು.

“ಸಾಲಮನ್ನಾ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಸರಕಾರ ಒಪ್ಪಿಗೆ ನೀಡಿದೆ. ಒಂದು ವೇಳೆ ಇದರಲ್ಲಿ ಸರಕಾರ ವಿಫಲವಾದಲ್ಲಿ ಮತ್ತೆ ಜುಲೈ 25ರಂದು ನಾವು ಹೋರಾಟ ಆರಂಭಿಸಲಿದ್ದೇವೆ’ ಎಂದು ರೈತ ಮುಖಂಡ ರಾಜು ಹೇಳಿದ್ದಾರೆ.

ಸಂಪೂರ್ಣ ಸಾಲಮನ್ನಾ, ಉಚಿತ ವಿದ್ಯುತ್ ಸಂಪರ್ಕ, ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ, ನೀರಾವರಿಗೆ ಅನುದಾನಗಳು, 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ರೈತರು ಹೋರಾಟ ಆರಂಭಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News