×
Ad

ಐವರು ರೈತರ ಸಾವು ದೊಡ್ಡ ವಿಷಯವೇನಲ್ಲ; ಬಿಜೆಪಿ ನಾಯಕ ವಿಜಯವರ್ಗೀಯ

Update: 2017-06-11 22:22 IST

ಹೊಸದಿಲ್ಲಿ,ಜೂ.11: ಮಂದಸೋರ್‌ನಲ್ಲಿ ಪೊಲೀಸ್ ಗೋಲಿಬಾರ್‌ನಲ್ಲಿ ಐವರು ರೈತರು ಬಲಿಯಾಗಿರುವುದು ‘ದೊಡ್ಡ ವಿಷಯ’ವಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಪಕ್ಷದ ಮಧ್ಯಪ್ರದೇಶ ಘಟಕದ ಹಿರಿಯ ಪದಾಧಿಕಾರಿ ಕೈಲಾಷ್ ವಿಜಯವರ್ಗೀಯ ಅವರು ಹೇಳಿದ್ದಾರೆ.

 ಆಂಗ್ಲ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಿದ್ದ ಈ ವಿವಾದಾತ್ಮಕ ನಾಯಕ, ಮುಖ್ಯಮಂತ್ರಿ ಮತ್ತು ಸರಕಾರದ ಆಶಯ ಮತ್ತು ನೀತಿಯನ್ನು ರೈತರು ಪ್ರಶಂಸಿಸಿದ್ದಾರೆ. ಕೆಳಸ್ತರದ ರೈತರಿಗೆ ಸರಕಾರಿ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವುದು ಕಷ್ಟವಾಗು ತ್ತಿದೆ ಎನ್ನುವುದು ನಿಜ. ಅವರು ಈ ಬಗ್ಗೆ ಕಳವಳಗೊಂಡಿದ್ದಾರೆ ಎಂದರು.

  ವ್ಯಾಪಕ ದಂಗೆ ನಡೆದಿದ್ದು ಏಕೆ ಎಂಬ ಪ್ರಶ್ನೆಗೆ, ಮಧ್ಯಪ್ರದೇಶವು ದೊಡ್ಡ ರಾಜ್ಯ ಎನ್ನುವುದನ್ನು ಪರಿಗಣಿಸಿದರೆ ಅದೊಂದು ದೊಡ್ಡ ವಿಷಯವೇ ಅಲ್ಲ. ಅದು ನಿಮಗೆ ದೊಡ್ಡ ವಿಷಯವಾಗಿ ಕಾಣಿಸುತ್ತಿರಬಹುದು. ಇಷ್ಟೊಂದು ದೊಡ್ಡ ರಾಜ್ಯದ 3-4 ಜಿಲ್ಲೆಗಳಲ್ಲಿ ಏನೋ ಸಂಭವಿಸಿದರೆ ಅದು ದೊಡ್ಡ ವಿಷಯವಲ್ಲ ಎಂದು ಉತ್ತರಿಸಿದ ವಿಜಯವರ್ಗೀಯ, ಮಧ್ಯಪ್ರದೇಶದಲ್ಲಿ ಎಷ್ಟು ಜಿಲ್ಲೆಗಳಿವೆ ಎನ್ನುವುದು ನಿಮಗೆ ಗೊತ್ತೇ? ಈ ಸಾವುಗಳಿಗೆ ಕಾಂಗ್ರೆಸ್ ಪಕ್ಷವು ಹೊಣೆಗಾರನಾಗಿದೆ. ಇದು ಒಂದು ಜಿಲ್ಲೆಯಲ್ಲಿ ನಡೆದಿರುವ ಘಟನೆ. ಇದಕ್ಕಾಗಿ ನೀವು ಇಡೀ ರಾಜ್ಯದ ಮೇಲೆ ದೋಷ ಹೊರಿಸುತ್ತೀರಾ ಎಂದು ಪ್ರಶ್ನಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News