ಲಿಬಿಯ ಬಳಿ ವಲಸಿಗರ ದೋಣಿ ದುರಂತ: 100ಕ್ಕೂ ಅಧಿಕ ವಲಸಿಗರ ಸಾವು?

Update: 2017-06-11 17:01 GMT

ಟ್ರಿಪೋಲಿ,ಜೂ.11: ಯುರೋಪ್‌ಗೆ ವಲಸೆ ಹೋಗಲು ರಬ್ಬರ್‌ದೋಣಿಯೊಂದರಲ್ಲಿ ಪ್ರಯಾಣಿಸುತ್ತಿದ್ದ 130ಕ್ಕೂ ಅದಿಕ ಮಂದಿ ಶನಿವಾರ ಲಿಬಿಯದ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ ಮೃತಪಟರುವ ಬಗ್ಗೆ ಭೀತಿ ವ್ಯಕ್ತವಾಗಿದೆ.

  ದೋಣಿಯಲ್ಲಿದ್ದ 130 ಪ್ರಯಾಣಿಕರ ಪೈಕಿ ಎಂಟು ಮಂದಿಯ ಶವ ಈವರೆಗೆ ಪತ್ತೆಯಾಗಿದೆಯೆಂದು ಲಿಬಿಯ ನೌಕಾಪಡೆಯ ವಕ್ತಾರ ಅಯೂಬ್ ಖಾಸಿಮ್ ತಿಳಿಸಿದ್ದಾರೆ. ತಿಳಿಸಿದ್ದಾರೆ. ಉಳಿದ 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಅವರು ಕೂಡಾ ಸಾವನ್ನಪ್ಪಿರುವ ಸಾಧ್ಯತೆಯಿದೆಯೆಂದು ಅವರು ಹೇಳಿದ್ದಾರೆ. ದುರಂತಕ್ಕೀಡಾದ ರಬ್ಬರ್ ದೋಣಿಯು ಗರಾಬುಲಿ ಪಟ್ಟಣದಿಂದ 8 ಕಿ.ಮೀ. ದೂರದ ಸಾಗರದಲ್ಲಿ ಪತ್ತೆಯಾಗಿದೆಯೆಂದು ಅವರು ಹೇಳಿದ್ದಾರೆ.

 ದುರಂತಕ್ಕೀಡಾದ ದೋಣಿಯಲ್ಲಿದ್ದ ವಲಸಿಗರು ಆಫ್ಪಿಕನ್, ಬಾಂಗ್ಲಾ ಹಾಗೂ ಮೊರಾಕ್ಕೊ ದೇಶಗಳ ನಾಗರಿಕರೆಂದು ಅವರು ತಿಳಿಸಿದ್ದಾರೆ.
  ಯುರೋಪ್‌ಗೆ ತಲುಪುವುದಕ್ಕಾಗಿ ಮೆಡಿಟರೇನಿಯನ್ ಸಮುದ್ರವನ್ನು ದಾಟಲು ಪ್ರಯತ್ನಿಸುವ ವಲಸಿಗರಿಗೆ ಲಿಬಿಯ ಪ್ರಶಸ್ತ ತಾಣವಾಗಿದೆ.

ಲಿಬಿಯದ ಪ್ರಸಕ್ತ ಗೊಂದಲ ಹಾಗೂ ಅಭದ್ರತೆಯ ವಾತಾವರಣವನ್ನು ದುರುಪಯೋಗಪಡಿಸಿಕೊಂಡು ಮಾನವಕಳ್ಳಸಾಗಣೆದಾರರು, ಅಪಾಯಕಾರಿ ಮೆಡಿಟರೇನಿಯನ್ ಸಮುದ್ರ ಮಾರ್ಗವಾಗಿ ಸಾವಿರಾರು ವಲಸಿಗರನ್ನು ಚಿಕ್ಕಪುಟ್ಚ ದೋಣಿಗಳಲ್ಲಿ ಯುರೋಪ್‌ಗೆ ಸಾಗಿಸುತ್ತ್ಜಾರೆ. ಅವರಲ್ಲಿ ಈ ಪ್ರಯತ್ನದಲ್ಲಿ ಹಲವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News