ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಭಾಷಣ ಮಾಡಿದ ಕೇರಳದ ಯುವತಿ

Update: 2017-06-12 13:04 GMT

ಹೊಸದಿಲ್ಲಿ, ಜೂ.12: ವಿಶ್ವಸಂಸ್ಥೆಯ ಪ್ರಥಮ ಸಾಗರ ಸಮಾಲೋಚನಾಸಮ್ಮೇಳನ (ಓಶಿಯನ್ ಕಾನ್ಫರೆನ್ಸ್)ದಲ್ಲಿ ತಿರುವನಂತಪುರಂನ ಮೀನುಗಾರ ಗ್ರಾಮದ ಯುವತಿಯೊಬ್ಬಳು ಭಾಷಣ ಮಾಡಿ ಜಗತ್ತಿನ ಗಮನ ಸೆಳೆದಿದ್ದಾಳೆ. ತಿರುವನಂತಪುರಂ ಪುಲ್ಲುವಿಳದ ಲಿಸ್ಬಾ ಯೇಶುದಾಸ್ ಈ ಗೌರವ ಗಳಿಸಿದ ಯುವತಿಯಾಗಿದ್ದು, ವಿವಿಧ ದೇಶಗಳ 112 ಸಂಘಟನೆಗಳು ಭಾಗವಹಿಸಿದ್ದ ಓಶಿಯನ್ ಕಾನ್ಫರೆನ್ಸ್‌ನಲ್ಲಿ ಅವಳು ಭಾಷಣ ಮಾಡಿದ್ದಾಳೆ. ಸಮುದ್ರ ಪರಿಸರದ ಪ್ರಾಮುಖ್ಯತೆಯನ್ನು ಅಲ್ಲಿನವರ ಭಾಷೆಯ ಅನುಭವವನ್ನು ಲಿಸ್ಬಾ ವೇದಿಕೆಯಲ್ಲಿ ವಿವರಿಸಿದಳು. ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಮಾತಾಡಿದ ಮೀನುಗಾರ ಸಮುದಾಯಕ್ಕೆ ಸೇರಿದ ಮತ್ತು ಕಡಿಮೆ ವಯಸ್ಸಿನ ಪ್ರತಿನಿಧಿ ಎನ್ನುವ ವಿಶೇಷತೆಯೂ ಈ ಯುವತಿಯ ಪಾಲಾಗಿದೆ.

‘ನಮ್ಮ ಸಮುದ್ರಗಳು ನಮ್ಮ ಭವಿಷ್ಯ’ ವಿಷಯದಲ್ಲಿ ಜೂನ್ ಐದರಿಂದ ಒಂಬತ್ತು ತಾರೀಕಿನವರೆಗೆ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಸಮ್ಮೇಳನ ನಡೆದಿತ್ತು. ಸಮುದ್ರ ಎದುರಿಸುತ್ತಿರುವ ನಾನಾ ಸಮಸ್ಯೆಗಳು, ಸವಾಲುಗಳು ಇಲ್ಲಿ ಚರ್ಚೆಯಾಗಿದ್ದು, ಪರಿಹಾರ ಮಾರ್ಗವನ್ನೂ ಸೂಚಿಸಲಾಯಿತು. ಸಮ್ಮೇಳನದಲ್ಲಿ ಲಿಸ್ಬಾ ತಿರುವನಂತಪುರಂನ ಮೀನುಗಾರರನ್ನು ಕೇಂದ್ರವಾಗಿರಿಸಿ ಕಾರ್ಯಾಚರಿಸುವ ಫ್ರೆಂಡ್ಸ್ ಆಫ್ ಮರೈನ್ ಎನ್ನುವ ಸಂಘಟನೆಯನ್ನು ಪ್ರತಿನಿಧಿಸಿದ್ದಳು.ಸಾಮಾನ್ಯ ಮೀನುಗಾರ ಕುಟುಂಬದಲ್ಲಿ ಲಿಸ್ಬಾ ಜನಿಸಿದ್ದು, ತಿರುವನಂತಪುರಂ ತುಂಬ ಸೆಂಟ್ ಸೇವಿಯರ್ ಕಾಲೇಜಿನಲ್ಲಿ ಮಳೆಯಾಳಂ ಭಾಷೆಯ ಪ್ರೊಫೆಸರ್ ಆಗಿದ್ದಾರೆ. ಜೊತೆಗೆ ಕೇರಳ ವಿಶ್ವವಿದ್ಯಾನಿಯಲಯದಿಂದ ಪಿಎಚ್‌ಡಿ ಕೂಡಾ ಮಾಡುತ್ತಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News