ಕೇಂದ್ರದ ನೂತನ ಜಾನುವಾರು ವ್ಯಾಪಾರ ನಿಯಮಗಳ ವಿರುದ್ಧ ಮೇಘಾಲಯ ಸರಕಾರದಿಂದ ನಿರ್ಣಯ ಮಂಡನೆ

Update: 2017-06-12 13:45 GMT

ಹೊಸದಿಲ್ಲಿ,ಜೂ.12: ಜಾನುವಾರು ಮಾರುಕಟ್ಟೆಗಳಲ್ಲಿ ಕಸಾಯಿಖಾನೆಗಳಿಗೆ ಜಾನುವಾರುಗಳ ಮಾರಾಟವನ್ನು ನಿಷೇಧಿಸಿ ಸರಕಾರವು ಇತ್ತೀಚಿಗೆ ಹೊರಡಿಸಿರುವ ಅಧಿಸೂಚನೆಯ ವಿರುದ್ಧ ಮೇಘಾಲಯ ಸರಕಾರವು ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿದೆ.
ಈಶಾನ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಬೀಫ್ ಪ್ರಮುಖ ಆಹಾರವಾಗಿದ್ದು, ಈ ಪ್ರದೇಶದಲ್ಲಿಯೂ ನಿಷೇಧವನ್ನು ಹೇರಲು ಬಿಜೆಪಿಯು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

 ಬೀಫ್ ಸೇವನೆ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಭಾಗವಾಗಿದೆ ಹಾಗೂ ಬಿಜೆಪಿಯ ಜಾತೀಯ ಸಿದ್ಧಾಂತದ ಹೇರಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣವನ್ನು ನೀಡಿ ಕಳೆದ ವಾರ ಇಬ್ಬರು ಸ್ಥಳೀಯ ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ್ದರು. ಕಾಂಗ್ರೆಸ್ ಆಡಳಿತವಿರುವ ಮೇಘಾಲಯದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News