×
Ad

ರಾಜಸ್ಥಾನ: ಜೂ.15ರಂದು ಆರೆಸ್ಸೆಸ್‌ನ ರೈತಸಂಘದಿಂದ ಪ್ರತಿಭಟನೆ

Update: 2017-06-12 19:26 IST

ಜೈಪುರ,ಜೂ.12: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಮತ್ತು ರೈತರ ಸಮಸ್ಯೆಗಳನ್ನು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂಬ ಆಗ್ರಹದೊಂದಿಗೆ ಜೂ.15ರಂದು ರಾಜ್ಯವ್ಯಾಪಿ ಧರಣಿ ಪ್ರತಿಭಟನೆಗಳನ್ನು ನಡೆಸುವುದಾಗಿ ಸಂಘ ಪರಿವಾರದ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘ(ಬಿಕೆಎಸ್)ವು ಸೋಮವಾರ ಪ್ರಕಟಿಸಿದೆ.

ಕಳೆದ ತಿಂಗಳು ಇಲ್ಲಿ ನಡೆದಿದ್ದ ರೈತ ಸಮಾವೇಶದ ಸಂದರ್ಭ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಒಂದು ದಿನದ ಅಧಿವೇಶನವನ್ನು ಕರೆಯುವಂತೆ ಆಗ್ರಹಿಸಿ ಸರಕಾರಕ್ಕೆ ಅಹವಾಲು ಸಲ್ಲಿಸಿದ್ದೆವು, ಆದರೆ ಸರಕಾರವು ಆ ಬಗ್ಗೆ ಯಾವುದೇ ಆಸಕ್ತಿಯನ್ನು ತೋರಿಸಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ಬಿಕೆಎಸ್‌ನ ಪ್ರಧಾನ ಕಾರ್ಯದರ್ಶಿ ಕೈಲಾಷ್ ಕಂಗೋಲಿಯಾ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News