ಮಿಝೋರಾಂ: ಬೀಫ್ ಉತ್ಸವದಲ್ಲಿ ನೂರಾರು ಜನರು ಭಾಗಿ
Update: 2017-06-12 19:27 IST
ಐಜ್ವಾಲ್(ಮಿಝೋರಾಂ),ಜೂ.12: ಜಾನುವಾರು ಮಾರುಕಟ್ಟೆಗಳಲ್ಲಿ ಕಸಾಯಿಖಾನೆ ಗಳಿಗೆ ಜಾನುವಾರುಗಳ ಮಾರಾಟವನ್ನು ನಿಷೇಧಿಸಿರುವ ಕೇಂದ್ರದ ಕ್ರಮವನ್ನು ಪ್ರತಿಭಟಿಸಿ ಸ್ಥಳೀಯ ಸಾಮಾಜಿಕ ಮಾಧ್ಯಮ ಗುಂಪು ‘ಝೋಲ್ಪೀ’ ಸೋಮವಾರ ಇಲ್ಲಿ ಆಯೋಜಿಸಿದ್ದ ಬೀಫ್ ಉತ್ಸವದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
ತಾವು ಬಯಸಿದ್ದನ್ನು ತಿನ್ನುವ ತಮ್ಮ ಹಕ್ಕುಗಳನ್ನು ನಿರ್ಬಂಧಿಸುವ ಕೇಂದ್ರ ಪ್ರಯತ್ನದ ವಿರುದ್ಧ ಪ್ರತಿಭಟಿಸುತ್ತಿರುವದಾಗಿ ಸಂಘಟಕರು ಸುದ್ದಿಗಾರರಿಗೆ ತಿಳಿಸಿದರು.
‘ನಮ್ಮ ತಕರಾರನ್ನು ಒಪ್ಪಿಕೊಳ್ಳಿ ಇಲ್ಲವೇ ಪ್ರತಿರೋಧವನ್ನು ಎದುರಿಸಿ’ ಮತ್ತು ‘ಬೀಫ್ ನಿಷೇಧ:ಧಾರ್ಮಿಕ ಮದ,ಇತಿಹಾಸದ ಕಡೆಗಣನೆ ಹಾಗೂ ಸಾಂಸ್ಕೃತಿಕ ದಬ್ಬಾಳಿಕೆ ’ ಇತ್ಯಾದಿ ಬರಹಗಳಿದ್ದ ಭಿತ್ತಿಪತ್ರಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.