‘ಕಾಳ ಕರಿಕಾಲನ್’: ಎರಡನೇ ಶೆಡ್ಯೂಲ್ ನಲ್ಲಿ ನಾನಾ ಪಾಟೇಕರ್

Update: 2017-06-13 04:30 GMT

ದಕ್ಷಿಣ ಭಾರತದ ಖ್ಯಾತ ಚಿತ್ರತಾರೆ ರಜನಿಕಾಂತ್ ಇದೀಗ ‘ಕಾಳ ಕರಿಕಾಲನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ‘ರೋಬೋ-2.0’ ಚಿತ್ರದ ನಂತರ  ಮತ್ತೊಂದು ಅದ್ದೂರಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ರಜನಿಕಾಂತ್ ಪರಿವಾರದಿಂದ ಸಾಗಿದೆ. ‘ಎಂದಿರನ್’ನ ಮುಂದಿನ ಭಾಗವಾಗಿರುವ ‘ರೋಬೋ-2.0’ ಚಿತ್ರ ಮುಂದಿನ ಜನವರಿಯಲ್ಲಿ ತೆರೆಗೆ ಬರಲಿದ್ದು, ಅದಾದ ನಂತರ ಸ್ಪಲ್ಪ ಸಮಯದಲ್ಲೇ ‘ಕಾಳ ಕರಿಕಾಲನ್’ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಇದೆಯಂತೆ.

ಅಳಿಯ ಧನುಷ್ ಮಾವ ರಜನಿಕಾಂತ್ ಗಾಗಿ ಬಹುಕೋಟಿ ರೂ. ವೆಚ್ಚದ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಈಗಾಗಲೇ ಒಂದು ಹಂತದ ಚಿತ್ರೀಕರಣವನ್ನು ಮುಗಿಸಲಾಗಿದೆ.
ಇದೀಗ ಸ್ಪಲ್ಪ ದಿನಗಳ ವಿಶ್ರಾಂತಿಗೆ ರಜನಿಕಾಂತ್ ಶರಣಾಗಿದ್ದಾರೆ. ಸದ್ಯವೇ ಮುಂದಿನ ಹಂತದ ಚಿತ್ರೀಕರಣವನ್ನು ಆರಂಭಿಸಲಾಗುವುದು. ಅದಕ್ಕಾಗಿ ಹೊಸ ಲೊಕೇಷನ್ ಗಳ ಆಯ್ಕೆ -ಮಾಡಲಾಗುತ್ತಿದೆ ಎಂದು ಧನುಷ್ ಹೇಳಿಕೊಂಡಿದ್ದಾರೆ.

ಇನ್ನೊಂದು ವಿಶೇಷವೆಂದರೆ ಈ ಚಿತ್ರದ ಎರಡನೇ ಶೆಡ್ಯೂಲ್ ನಲ್ಲಿ ಬಾಲಿವುಡ್ ನಟ ನಾನಾ ಪಾಟೇಕರ್ ಕಾಣಿಸಿಕೊಳ್ಳಲಿದ್ದಾರೆ. ಅವರಿಗಾಗಿ ಪ್ರಮುಖ ಪಾತ್ರವೊಂದನ್ನು ಹಂಚಲಾಗುತ್ತಿದೆ ಎಂದು ಧನುಷ್ ಹೇಳಿಕೊಂಡಿದ್ದಾರೆ. 

ಅವರೊಬ್ಬ ರಾಜಕಾರಣಿಯಾಗಿ ಪಾತ್ರ ಮಾಡಲಿದ್ದು, ತಮಿಳು ಭಾಷಿಗರಿಗಾಗಿ ನಾನಾ ಪಾಟೇಕರ್ ರಾಜಕೀಯವಾಗಿ ಸೆಣೆಸಾಡುವ ಸನ್ನಿವೇಶವನ್ನು ಎರಡನೇ ಹಂತದಲ್ಲಿ ಚಿತ್ರೀಕರಿಸಲಾಗುತ್ತದೆಯಂತೆ. ಕಬಾಲಿ ಚಿತ್ರದ ರಂಜಿತ್ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News