ತಪ್ಪುಗ್ರಹಿಕೆ ಬೇಡ,ಜು.1ರಿಂದ ಜಿಎಸ್‌ಟಿ ಜಾರಿ ಖಚಿತ:ಸರಕಾರ

Update: 2017-06-13 14:33 GMT

ಹೊಸದಿಲ್ಲಿ,ಜೂ.13: ಜು.1ರಿಂದ ಜಿಎಸ್‌ಟಿ ಖಂಡಿತವಾಗಿ ಜಾರಿಗೊಳಗೊಳ್ಳಲಿದೆ ಎಂದು ಮಂಗಳವಾರ ಇಲ್ಲಿ ಸುಳಿವು ನೀಡಿದ ಸರಕಾರವು, ಅದರ ಜಾರಿಯನ್ನು ವಿಳಂಬಗೊಳಿಸಲು ತಾನು ಚಿಂತನೆ ನಡೆಸಿದ್ದೇನೆ ಎಂಬ ವದಂತಿಯನ್ನು ತಳ್ಳಿಹಾಕಿದೆ.
ಜಿಎಸ್‌ಟಿ ಜಾರಿಯನ್ನು ವಿಳಂಬಗೊಳಿಸಲಾಗುತ್ತದೆ ಎಂಬ ವದಂತಿಗಳು ಸಂಪೂರ್ಣ ಸುಳ್ಳು ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಆಧಿಯಾ ಅವರು ಟ್ವೀಟಿಸಿದ್ದಾರೆ.

ಈ ವಿಷಯದಲ್ಲಿ ಯಾವುದೇ ತಪ್ಪುಗ್ರಹಿಕೆ ಬೇಡ. ಜಿಎಸ್‌ಟಿ ಜಾರಿಯನ್ನು ವಿಳಂಬ ಗೊಳಿಸುವ ಯಾವುದೇ ಯೋಜನೆಯಿಲ್ಲ ಎಂದು ಗುರುತು ಬಹಿರಂಗಗೊಳಿಸಲು ಬಯಸದ ಹಿರಿಯ ಸರಕಾರಿ ಅಧಿಕಾರಿಯೋರ್ವರು ಮತ್ತು ರಾಜ್ಯ ತೆರಿಗೆ ಅಧಿಕಾರಿ ಯೋರ್ವರು ತಿಳಿಸಿದರು.
ಆದರೂ,ಜಿಎಸ್‌ಟಿ ವ್ಯವಸ್ಥೆಗೆ ಸಿದ್ಧಗೊಳ್ಳಲು ರಾಜ್ಯಮಟ್ಟದಲ್ಲಿ ಸಮಸ್ಯೆಗಳು ಎದುರಾಗಿವೆ ಎಂದು ಹೇಳಿದ ಮೂವರು ರಾಜ್ಯ ಸರಕಾರಿ ಅಧಿಕಾರಿಗಳು, ಜಿಎಸ್‌ಟಿ ಜಾರಿ ವಿಳಂಬಗೊಳ್ಳುವ ಸಾಧ್ಯತೆಯಿದೆ ಎಂದು ತಾವು ಭಾವಿಸಿರುವುದಾಗಿ ತಿಳಿಸಿದರು.

ಜು.1ರಿಂದ ಜಿಎಸ್‌ಟಿಯನ್ನು ಜಾರಿಗೊಳಿಸಬೇಕೇ ಎಂಬ ಬಗ್ಗೆ ಅಂತಿಮ ನಿರ್ಧಾರ ವೊಂದು ರವಿವಾರ ನಡೆಯಲಿರುವ ಜಿಎಸ್‌ಟಿ ಮಂಡಳಿಯ ಸಭೆಯ ಬಳಿಕ ಹೊರಬೀ ಳುವ ಸಾಧ್ಯತೆಯಿದೆ ಎಂದು ಹೇಳಿದ ಈ ಅಧಿಕಾರಿಗಳೂ ತಮ್ಮ ಗುರುತನ್ನು ಬಹಿರಂಗ ಗೊಳಿಸದಂತೆ ಸುದ್ದಿಸಂಸ್ಥೆಯನ್ನು ಕೋರಿಕೊಂಡರು.

ಜಿಎಸ್‌ಟಿ ಜಾರಿಗಾಗಿ ಕನಿಷ್ಠ ಶೇ.80ರಷ್ಟು ಸಿದ್ಧವಾಗಿರುವ ಆಶಯವನ್ನು ವಿತ್ತ ಸಚಿವಾಲಯವು ವ್ಯಕ್ತಪಡಿಸಿದೆ. ಕಂಪನಿಗಳ ತೆರಿಗೆ ವಿವರ ಸಲ್ಲಿಕೆಗೆ ಕೆಲವು ತಿಂಗಳ ಸಮಯಾವಕಾಶ ದೊರೆಯುವ ಸಾಧ್ಯತೆಯಿದೆ ಎಂದು ಪ್ರತ್ಯೇಕವಾಗಿ ಕೇಂದ್ರ ಸರಕಾರದ ಇಬ್ಬರು ಅಧಿಕಾರಿಗಳು ತಿಳಿಸಿದರು.
ಜಿಎಸ್‌ಟಿ ಜಾರಿಗೆ ತಾನು ವಿತ್ತ ಸಚಿವಾಲಯದಿಂದ ಮೂರು ತಿಂಗಳ ಸಮಯಾವ ಕಾಶವನ್ನು ಕೋರಿದ್ದೇನೆ ಎಂದು ಸುಮಾರು 10,000 ಸಣ್ಣ ಮತ್ತು ಮಧ್ಯಮ ಉದ್ಯಮ ಗಳನ್ನು ಪ್ರತಿನಿಧಿಸುವ ಅಖಿಲ ಭಾರತ ತಯಾರಕರ ಸಂಘ(ಎಐಎಂಎ)ವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News