" ಬಿಲಿಯಗಟ್ಟಲೆ ಹಣದ ಕನಸು ಕಾಣುತ್ತಾ ಇರಿ " : ಭಾರತೀಯರಿಗೆ ಮಲ್ಯ ಲೇವಡಿ

Update: 2017-06-13 14:43 GMT

ಲಂಡನ್ , ಜೂ. 13 : ಬ್ರಿಟನ್ ನ್ಯಾಯಾಲಯವೊಂದಕ್ಕೆ ಇಂದು ಹಾಜರಾದ ಮದ್ಯ ದೊರೆ ವಿಜಯ್ ಮಲ್ಯ " ಬಿಲ್ಲಿಯಗಟ್ಟಲೆ ಪೌನ್ಡ್ ಗಳ ಬಗ್ಗೆ ಕನಸು ಕಾಣುತ್ತಾ ಇರಿ " ಎಂದು ಅಲ್ಲಿದ್ದ ವರದಿಗಾರರಿಗೆ ಹೇಳುವ ಮೂಲಕ ಭಾರತೀಯರನ್ನು ಲೇವಡಿ ಮಾಡಿದ್ದಾರೆ. ಭಾರತೀಯ ಬ್ಯಾಂಕುಗಳಿಗೆ  9,000 ಕೋಟಿ ರೂಪಾಯಿ  ($1.4 ಬಿಲಿಯನ್ ) ಸಾಲ ಬಾಕಿ ಇಟ್ಟಿರುವ ವಿಜಯ್ ಮಲ್ಯ ಇಂಗ್ಲೆಂಡ್ ಗೆ ಪರಾರಿಯಾಗಿ ಈಗ ಅಲ್ಲೇ ವಾಸಿಸುತ್ತಿದ್ದಾರೆ. 

ತಮಗಾಗಿ ಕಾಯುತ್ತಿದ್ದ ವರದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮಲ್ಯ, " ನಾನು ನಿಮ್ಮ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ನಿನ್ನೆ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಇಬ್ಬರು ಕುಡುಕರು ನನಗೆ ತೊಂದರೆ ನೀಡಿದ್ದನ್ನು ದೊಡ್ಡ ವಿಷಯ ಮಾಡಿದ್ದೀರಿ. ಅಲ್ಲಿ ಹಲವಾರು ನನಗೆ ಶುಭಾಶಯ ಸಲ್ಲಿಸಿದ್ದಾರೆ " ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News