×
Ad

ವರ್ಜೀನಿಯ: ಅಮೆರಿಕನ್ ಕಾಂಗ್ರೆಸಿಗನ ಮೇಲೆ ಗುಂಡು

Update: 2017-06-14 22:53 IST

ವರ್ಜೀನಿಯ (ಅಮೆರಿಕ), ಜೂ. 14: ಸಂಸದರ ನಡುವಿನ ಬೇಸ್‌ಬಾಲ್ ಸ್ಪರ್ಧೆಗಾಗಿ ವಾಶಿಂಗ್ಟನ್ ಉಪನಗರ ವರ್ಜೀನಿಯದ ಡೆಲ್ ರೇ ಎಂಬಲ್ಲಿ ಬೇಸ್‌ಬಾಲ್ ಅಭ್ಯಾಸ ನಡೆಸುತ್ತಿದ್ದ ಗುಂಪೊಂದರ ಮೇಲೆ ದುಷ್ಕರ್ಮಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಅಮೆರಿಕದ ಹಿರಿಯ ರಿಪಬ್ಲಿಕನ್ ಕಾಂಗ್ರೆಸಿಗ ಸ್ಟೀವ್ ಸ್ಕಾಲೈಸ್ ಗಾಯಗೊಂಡಿದ್ದಾರೆ.

ಕನಿಷ್ಠ ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಓರ್ವ ಕಾಂಗ್ರೆಸ್ ಸಿಬ್ಬಂದಿ ಕೂಡ ಗುಂಡು ಹಾರಾಟದಲ್ಲಿ ಗಾಯಗೊಂಡಿದ್ದಾರೆ.

ದುಷ್ಕರ್ಮಿ ಮಧ್ಯ ವಯಸ್ಸಿನ ಬಿಳಿ ಪುರುಷನೋರ್ವನನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News