ಆತ್ಮಹತ್ಯಾ ದಾಳಿಯಲ್ಲಿ ವಿರೋಧಿ ತಾಲಿಬಾನ್ ಗುಂಪಿನ 9 ಸಾವು

Update: 2017-06-14 17:52 GMT

ಕಂದಹಾರ್, ಜೂ. 14: ಅಫ್ಘಾನಿಸ್ತಾನದ ದಕ್ಷಿಣದ ಹೆಲ್ಮಂಡ್ ಪ್ರಾಂತದಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬ ವಿರೋಧಿ ಬಂಡುಕೋರ ಗುಂಪೊಂದು ನಿರ್ವಹಿಸುತ್ತಿದ್ದ ತಪಾಸಣಾ ಠಾಣೆಯ ಸಮೀಪ ತನ್ನನ್ನು ತಾನು ಸ್ಫೋಟಿಸಿಕೊಂಡಾಗ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬುಧವಾರ ಮುಂಜಾನೆ ನಡೆದ ದಾಳಿಯಲ್ಲಿ ಸಿಡಿದು ಹೋದ ತಾಲಿಬಾನ್ ಬಣದ ಆರು ಬಂಡುಕೋರರು ಗಾಯಗೊಂಡಿದ್ದಾರೆ ಎಂದು ಗರೇಶ್ಕ್ ಜಿಲ್ಲಾಧಿಕಾರಿ ಮುಹಮ್ಮದ್ ಸಲೀಮ್ ರೋಹ್ದಿ ತಿಳಿಸಿದರು.

 ಇಲ್ಲಿ ವಿರೋಧಿ ತಾಲಿಬಾನ್ ಗುಂಪುಗಳು ಹಿಂದಿನಿಂದಲೂ ಪರಸ್ಪರ ಘರ್ಷಣೆಯಲ್ಲಿ ತೊಡಗಿವೆ. ತಾಲಿಬಾನ್‌ನ ಹೆಲ್ಮಂಡ್ ಕಮಾಂಡರ್ ಮುಲ್ಲಾ ರಸೂಲ್‌ನ ಬೆಂಬಲಿಗರು ತಾಲಿಬಾನ್ ನಾಯಕ ಮುಲ್ಲಾ ಹೈಬತುಲ್ಲಾ ಅಖುಂಡ್‌ಝಾದನ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News