×
Ad

ಆನ್‌ಲೈನ್‌ನಲ್ಲಿ 15 ಲಕ್ಷ ವಿದ್ಯಾರ್ಥಿಗಳ ದತ್ತಾಂಶ ಸೋರಿಕೆ,ಖರೀದಿಗೆ ಲಭ್ಯ...!

Update: 2017-06-15 18:16 IST

ಹೊಸದಿಲ್ಲಿ,ಜೂ.15: ಕನಿಷ್ಠ 15 ಲಕ್ಷ ವಿದ್ಯಾರ್ಥಿಗಳ ದೂರವಾಣಿ ಸಂಖ್ಯೆ, ಇಮೇಲ್ ಐಡಿ ಮತ್ತು ವಿಳಾಸಗಳು ಆನ್‌ಲೈನ್‌ನಲ್ಲಿ ಮಾರಾಟಕ್ಕಿವೆ. ಈ ಸೋರಿಕೆ ಹೇಗೆ ನಡೆದಿದೆ ಎನ್ನುವುದು ಸ್ಪಷ್ಟವಾಗಿಲ್ಲ.

1,000 ರೂ.ನಿಂದ 60,000 ರೂ.ವರೆಗೆ ಪಾವತಿಸಿದರೆ 2009ರಿಂದಲೂ ವಿವಿಧ ಬಗೆಯ ಪರೀಕ್ಷೆಗಳಿಗೆ ಹಾಜರಾಗಿದ್ದ ಕನಿಷ್ಠ 1.5 ಲ.ವಿದ್ಯಾರ್ಥಿಗಳ ಕುರಿತು ಮಾಹಿತಿ ಗಳನ್ನು ಪಡೆಯಬಹುದಾಗಿದೆ.

  ಡಾಟಾ ಶೀಟ್‌ಗಳಿಂದ ಸ್ಯಾಂಪಲ್‌ಗಳು ಸ್ಟುಡೆಂಟ್‌ಡಾಟಾಬೇಸ್ ಡಾಟ್ ಇನ್, ಕೆನಿಲ್ಸ್ ಡಾಟ್ ಕೋ ಡಾಟ್ ಇನ್ ಮತ್ತು ಆಲ್‌ಸ್ಟುಡೆಂಟ್‌ಡಾಟಾಬೇಸ್ ಡಾಟ್ ಇನ್‌ನಂತಹ ವೆಬ್‌ಸೈಟ್‌ಗಳಲ್ಲಿ ಉಚಿತವಾಗಿ ಲಭ್ಯವಿವೆ. ಡಾಟಾ ಸೋರಿಕೆಯಾಗಿರುವ ವಿದ್ಯಾರ್ಥಿಗಳು ಎಂಬಿಎ ಪ್ರವೇಶ ಪರೀಕ್ಷೆಗಳು, ಕೆಲವು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳು, ಕೆಲವು ಮಂಡಳಿಗಳ 10 ಮತ್ತು 12 ನೇ ತರಗತಿಗಳ ಪರೀಕ್ಷೆಗಳು ಮತ್ತು ಕೆಲವು ವಿವಿಗಳ(ಲಕ್ನೋ ಮತ್ತು ಪುಣೆ)ಅಂತಿಮ ವರ್ಷದ ಪರೀಕ್ಷೆಗಳಿಗೆ ಹಾಜರಾಗಿದ್ದವರು ಎನ್ನುವುದು ಸ್ಪಷ್ಟವಾಗಿದೆ.

ಪರೀಕ್ಷಾ ಮಂಡಳಿ, ವಿವಿ ಅಥವಾ ಪರೀಕ್ಷೆಗಳ ಉಸ್ತುವಾರಿ ಹೊಂದಿದ್ದ ಸಂಸ್ಥೆ ಅಥವಾ ನಾಯಿಕೊಡೆಗಳಂತೆ ತಲೆಯೆತ್ತಿರುವ ಈ ಪರೀಕ್ಷೆಗಳ ಕೋಚಿಂಗ್ ಸೆಂಟರ್‌ಗಳು...ಹೀಗೆ ಹಲವಾರು ಸಾಧ್ಯತೆಗಳಿದ್ದರೂ ಈ ದತ್ತಾಂಶಗಳ ಸೋರಿಕೆಯ ನಿಖರ ಮೂಲ ಯಾವುದು ಎನ್ನುವುದು ಸ್ಪಷ್ಟವಾಗಿಲ್ಲ.

ವಿದ್ಯಾರ್ಥಿಯ ಹೆಸರು, ಅಂಕ, ಶೇಕಡಾವಾರು, ಲಿಂಗ, ವರ್ಗ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಗಳಂತಹ ಸಂಪೂರ್ಣ ಮಾಹಿತಿಗಳು ಸೋರಿಕೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News