×
Ad

ವಿಷ್ಣುವಿನ 11ನೆ ಅವತಾರ “ಅಮ್ಮಾ”ವತಾರ: ಎಐಎಡಿಎಂಕೆ ಶಾಸಕನ ಹೊಸ ಸಂಶೋಧನೆ

Update: 2017-06-16 19:58 IST

ಚೆನ್ನೈ, ಜೂ.16: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಲರಿ ಕ್ಲಿಂಟನ್ ಜಯಲಲಿತಾರಿಂದ ಪ್ರೇರಣೆಗೊಂಡಿದ್ದರು ಎಂದು ಎಐಎಡಿಎಂಕೆ ಶಾಸಕರೊಬ್ಬರ ಹೇಳಿಕೆ ನಗೆಪಾಟಲಿಗೀಡಾಗಿತ್ತು. ಆದರೆ ಈ ಬಾರಿ ಎಐಡಿಎಂಕೆ ಶಾಸಕ ಮರಿಯಪ್ಪನ್ ಕೆನಡಿ ಎಂಬವರು, ಜಯಲಲಿತಾ ವಿಷ್ಣುವಿನ 11ನೆ ಅವತಾರ ಎಂದಿದ್ದಾರೆ!.

ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಅವರು, ಜಯಲಲಿತಾರನ್ನು ವಿಷ್ಣುವಿನ 11ನೆ ಅವತಾರ ಎಂದರು. ಶಿಕ್ಷಣಕ್ಕೆ ಸಂಬಂಧಿಸಿದ ಚರ್ಚೆ ನಡೆಯುತ್ತಿದ್ದ ಸಂದರ್ಭ ವಿಷ್ಣುವಿನ ಅವತಾರಗಳ ಬಗ್ಗೆ ವಿವರಿಸಿದ ಅವರು 11ನೆ ಅವತಾರವಾಗಿ ಜಯಲಲಿತಾರನ್ನು ಹೆಸರಿಸಿದರು. ಜಯಲಲಿತಾರ ಸ್ಥಾನಕ್ಕೆ ಶಶಿಕಲಾ ಸೂಕ್ತವಾಗಿದ್ದಾರೆ ಹಾಗೂ ಜಯಲಲಿತಾರಂತೆ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯವೂ ಶಶಿಕಲಾರಿಗೆ ಇದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News