ಸಲ್ಮಾನ್ ಚಿತ್ರದಲ್ಲಿ ಪ್ರಭಾಸ್?

Update: 2017-06-17 10:48 GMT

ಬಾಕ್ಸ್‌ಆಫೀಸ್‌ನ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿದ ಬಾಹುಬಲಿ ಚಿತ್ರದ ನಾಯಕ ಪ್ರಭಾಸ್ ಈಗ ಬಾಲಿವುಡ್‌ನಲ್ಲೂ ಬಿಸಿಬಿಸಿ ಚರ್ಚೆಯ ವಿಷಯವಾಗಿದ್ದಾರೆ. ಟಾಲಿವುಡ್‌ನ ಸೂಪರ್‌ಹೀರೋಗಳ ಸಾಲಿನಲ್ಲಿರುವ ಪ್ರಭಾಸ್‌ರ ಬಾಲಿವುಡ್ ಪ್ರವೇಶ ಯಾವಾಗ ಎಂಬ ಪ್ರಶ್ನೆ ಬಿಟೌನ್ ಮಂದಿಯನ್ನು ಕಾಡುತ್ತಿದೆ. ಇದೀಗ ಖ್ಯಾತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್, ಪ್ರಭಾಸ್ ಅಭಿನಯದಲ್ಲಿ ಬಾಲಿವುಡ್ ಚಿತ್ರವನ್ನು ನಿರ್ಮಿಸಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಪ್ರಭಾಸ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇನ್ನ್ನೊಂದು ವದಂತಿಗಳ ಪ್ರಕಾರ ಪ್ರಭಾಸ್ ಅವರು ಸಲ್ಮಾನ್‌ಖಾನ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಲಿದ್ದಾರಂತೆ. ಭಾರೀ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶಿಸಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಇತರ ಯಾವುದೇ ಮಾಹಿತಿ ಈವರೆಗೆ ಬಹಿರಂಗಗೊಂಡಿಲ್ಲ.

ಈಗ ಪ್ರಭಾಸ್ ‘ಸಾಹೋ’ ಎಂಬ ತೆಲುಗುಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದ ನಾಯಕಿಯಾಗಿ ಅನುಷ್ಕಾ ಶೆಟ್ಟಿ ಅಭಿನಯಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News