ಆಕೆ ಬರುತ್ತಿದ್ದಾಳೆ

Update: 2017-06-17 10:53 GMT

ಈಗ ಸ್ಯಾಂಡಲ್‌ವುಡ್‌ನಲ್ಲಿಯೂ ಹಾರರ್ ಚಿತ್ರಗಳ ಗಾಳಿ ಬಲವಾಗಿ ಬೀಸತೊಡಗಿದೆ. ಹೌದು. ಸೂಪರ್‌ಹಿಟ್ ‘ಆಟಗಾರ’ ಚಿತ್ರದ ನಿರ್ದೇಶಕ ಕೆ.ಎಂ.ಚೈತನ್ಯ ಅವರ ‘ಆಕೆ’ ಸಂಪೂರ್ಣ ಹಾರರ್ ಕಥಾವಸ್ತುವನ್ನು ಹೊಂದಿದೆ.

 ‘ ಆಕೆ’ಗೆ ನಾಯಕನಾಗಿ ಚಿರಂಜೀವಿ ಸರ್ಜಾ ನಟಿಸಿದ್ದಾರೆ. ಆಟಗಾರ ಚಿತ್ರದ ಬಳಿಕ ಮತ್ತೊಮ್ಮೆ ಚೈತನ್ಯ ನಿರ್ದೇಶನದ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಯಾಗಿ ಶರ್ಮಿಳಾ ಮಾಂಡ್ರೆ ಅಭಿನಯಿಸಿದ್ದು, ಇದು ಆಕೆಯ ಚಿತ್ರಬದುಕಿಗೆ ಹೊಸ ಬ್ರೇಕ್ ನೀಡಲಿದೆಯೆಂದು ಚಿತ್ರತಂಡ ಹೇಳಿಕೊಂಡಿದೆ. ಅಂದಹಾಗೆ ಚಿತ್ರದ ಅರ್ಧದಷ್ಟು ಭಾಗವನ್ನು ಲಂಡನ್‌ನಲ್ಲಿಯೇ ಚಿತ್ರೀಕರಿಸಲಾಗಿದೆಯಂತೆ. ತಮಿಳಿನಲ್ಲಿ ಸಿಕ್ಕಾಬಟ್ಟೆ ಯಶಸ್ಸು ಕಂಡ ಮಾಯಾ ಚಿತ್ರದ ರಿಮೇಕ್ ಇದಾದರೂ, ಕನ್ನಡ ಪ್ರೇಕ್ಷಕರಿಗೆ ರುಚಿಸುವ ಹಾಗೆ ಕಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆಯಂತೆ. ತಾಂತ್ರಿಕವಾಗಿಯೂ ‘ಆಕೆ’ ತುಂಬಾ ರಿಚ್ ಆಗಿಯೇ ಮೂಡಿಬಂದಿದೆಯೆಂದು ಚೈತನ್ಯ ಹೇಳುತ್ತಾರೆ.

‘ಆಕೆ’ಯ ಮೂಲಕ ಬಾಲಿವುಡ್‌ನ ಪ್ರಸಿದ್ಧ ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆ ಇರೋಸ್ ಸ್ಯಾಂಡಲ್‌ವುಡ್ ಪ್ರವೇಶಿಸಿದೆ. ಚಿತ್ರದ ವಿತರಣೆಯ ಹಕ್ಕುಗಳನ್ನು ಅದು ಪಡೆದುಕೊಂಡಿದೆ.

ಪ್ರಕಾಶ್ ಬೆಳವಾಡಿ, ಅಚ್ಯುತ್ ಕುಮಾರ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಆಕೆ’ಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News