ಅಫ್ಘಾನ್ ಸೈನಿಕನಿಂದ ಗುಂಡೆಸೆತ: ಮೂವರು ಅಮೆರಿಕ ಯೋಧರಿಗೆ ಗಾಯ
Update: 2017-06-17 22:35 IST
ಕಾಬೂಲ್,ಜೂ.17: ಉತ್ತರ ಅಫ್ಘಾನಿಸ್ತಾನದ ಸೇನಾ ನೆಲೆಯೊಂದರಲ್ಲಿ ಅಫ್ಘಾನ್ ಯೋಧನೊಬ್ಬ ಅಮೆರಿಕನ್ ಸೈನಿಕರ ಮೇಲೆ ಗುಂಡುಹಾರಿಸಿ, ಮೂವರನ್ನು ಗಂಭೀರವಾಗಿ ಗಾಯಗೊಳಿಸಿರುವುದಾಗಿ ಅಫ್ಘಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಮಝರ್ ಎ ಶರೀಫ್ ನಗರದ ಸಮೀಪವೇ ಇರುವ ‘ಕ್ಯ್ಡಾಂಪ್ ಶಹೀನ್’ ಸೇನಾನೆಲೆಯಲ್ಲಿ ಈ ಗುಂಡೆಸೆತ ನಡೆದಿದೆ. ಅಫ್ಘಾನ್ ಯೋಧರು ತಮಗೆ ತರಬೇತಿ ನೀಡುತ್ತಿರುವ ಅಮೆರಿಕನ್ ಸೈನಿಕರ ಮೇಲೆ ಗುಂಡುಹಾರಾಟ ನಡೆಸಿದ ಹಲವು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗಿವೆ.
ತಾಲಿಬಾನ್ ಬಂಡುಕೋರರು ತಮ್ಮ ದಾಳಿಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಅಮೆರಿಕವು ಹೆಚ್ಚುವರಿ ಪಡೆಗಳನ್ನು ಅಫ್ಘಾನ್‌ಗೆ ಕಳುಹಿಸಲು ನಿರ್ಧರಿಸಿರುವ ಬೆನ್ನಲ್ಲೇ ್ಟಈ ಬೆಳವಣಿಗೆಗಳು ಸಂಭವಿಸಿವೆ.