ಉತ್ತರ ಪ್ರದೇಶದಲ್ಲಿ “ಹೆಸರು”ಗಳಿಗಷ್ಟೇ ಮೀಸಲಾದ ಬದಲಾವಣೆ: ಆದಿತ್ಯನಾಥ್ ಸರಕಾರದ ಸಾಧನೆ

Update: 2017-06-18 07:13 GMT

ಉತ್ತರ ಪ್ರದೇಶ, ಜೂ.18: ರಾಜ್ಯದ ಅಭಿವೃದ್ಧಿಯ ಆಶ್ವಾಸನೆಗಳೊಂದಿಗೆ ಅಧಿಕಾರಕ್ಕೇರಿದ ಆದಿತ್ಯನಾಥ್ ಸರಕಾರ ಬದಲಾವಣೆಗಳನ್ನು ಹೆಸರುಗಳಲ್ಲಿ ಮಾಡುತ್ತಿದೆಯೇ ಹೊರತು ಇತರ ಕ್ಷೇತ್ರಗಳಲ್ಲಿ. ಆದಿತ್ಯನಾಥ್ ಆಡಳಿತದಲ್ಲಿ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಗೋರಕ್ಷಕರ ಅಟ್ಟಹಾಸ ಸೇರಿದಂತೆ ಅಪರಾಧ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದೆ.

ಕಳೆದ ವಾರವಷ್ಟೇ ಭಾರತೀಯ ವಾಯುನೆಲೆಯ ನಾಗರಿಕ ಟರ್ಮಿನಲ್ ಗೆ ಮಹಾಯೋಗಿ ಗೋರಕ್ ನಾಥ್ ರ ಹೆಸರಿಡಲು ನಿರ್ಧರಿಸಲಾಗಿತ್ತು. ನಾಥ ಪಂಥ ಚಳವಳಿಯ ಸಂಸ್ಥಾಪಕ ಮಹಾಯೋಗಿ ಗೋರಕ್ ನಾಥರ ಹೆಸರನ್ನು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಕೂಡ ಇದೇ ಚಳವಳಿಯ ಅನುಯಾಯಿಯಾಗಿದ್ದಾರೆ.

ಇಷ್ಟೇ ಅಲ್ಲದೆ ಆಗ್ರಾ ವಿಮಾನ ನಿಲ್ದಾಣಕ್ಕೆ ಬಿಜೆಪಿ ಸಿದ್ಧಾಂತಿ ದೀನ್ ದಯಾಳ್ ಉಪಾಧ್ಯಾಯರ ಹೆಸರಿಡಲು ಆದಿತ್ಯನಾಥ್ ಸರಕಾರ ಚಿಂತನೆ ನಡೆಸಿದೆ. ಎರಡೂ ಟರ್ಮಿನಲ್ ಗಳ ಹೆಸರು ಬದಲಾವಣೆಯ ಪ್ರಸ್ತಾಪವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಾರಣಾಸಿಯಲ್ಲಿರುವ ಮುಘಲ್ ಸರೈ ಸ್ಟೇಷನ್ ನ ಹೆಸರನ್ನು ಬದಲಾಯಿಸಲು ಉತ್ತರ ಪ್ರದೇಶ ಸರಕಾರ ನಿರ್ಧರಿಸಿದ್ದು, ಸಚಿವಾಲಯ ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಎಲ್ಲಾ ಸರಕಾರಿ ಯೋಜನೆಗಳಿಂದ “ಸಮಾಜವಾದಿ” ಹೆಸರನ್ನು ತೆಗೆದುಹಾಕುವಂತೆ ಆದಿತ್ಯನಾಥ್ ಆದೇಶಿಸಿದ ನಂತರ  ಈ ಬದಲಾವಣೆಗಳು ನಡೆದಿವೆ. ಈಗಾಗಲೇ ಸಮಾಜವಾದಿ ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇ “ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇ” ಆಗಿದೆ. ಇದೇ ರೀತಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರ ಯೋಜನೆಯಾದ “ಸಮಾಜವಾದಿ ಆ್ಯಂಬುಲೆನ್ಸ್ ಸೇವೆ”ಯ ಹೆಸರು “ಆ್ಯಂಬುಲೆನ್ಸ್ ಸೇವೆ”  ಎಂದು ಬದಲಾವಣೆಯಾಗಿದೆ.

ಎಲ್ಲಾ ಯೋಜನೆಗಳಲ್ಲೂ ಸಮಾಜವಾದಿ ಹೆಸರಿನ ಬದಲಾಗಿ “ಮುಖ್ಯಮಂತ್ರಿ” ಎಂದು ಹೆಸರಿಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ವೃದ್ಧರಿಗೆ ನೀಡಲಾಗುತ್ತಿದ್ದ ಪಿಂಚಣಿ ಯೋಜನೆ ಈಗಾಗಲೇ ಮುಖ್ಯಮಂತ್ರಿ ಪಿಂಚಣಿ ಯೋಜನೆ ಎಂದು ಬದಲಾಗಿದೆ. ಆದಿತ್ಯನಾಥ್ ಸಲಹೆಯಂತೆ ಸಮಾಜವಾದಿ ಪಕ್ಷದ ಯೋಜನೆಗಳಿಗೆ ಮುಖ್ಯಮಂತ್ರಿ ಯೋಜನೆ ಎಂದು ಹೆಸರು ಬದಲಾಯಿಸಲು ಸಿದ್ಧತೆಗಳೂ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News