ಕೈರ್ನ್ ತೆರಿಗೆ ವಿವಾದ:10 ಸಾವಿರ ಕೋ. ರೂ. ಹಿಂದೆ ಪಡೆಯಲು ಆದಾಯ ತೆರಿಗೆ ಇಲಾಖೆ ಆದೇಶ

Update: 2017-06-19 17:04 GMT

ಹೊಸದಿಲ್ಲಿ, ಜೂ. 19: 10,247 ಕೋಟಿ ರೂಪಾಯಿ ಪೂರ್ವಾನ್ವಯ ತೆರಿಗೆ ಹಿಂದೆ ಪಡೆಯಲು ಬ್ರಿಟಿಶ್ ಮೂಲದ ಕೈರ್ನ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪೆನಿ ವಿರುದ್ಧ ಆದಾಯ ತೆರಿಗೆ ಇಲಾಖೆ ಕಠಿಣ ಕ್ರಮಕ್ಕೆ ಆದೇಶಿಸಿದೆ.

ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಮಂಡಳಿಯಲ್ಲಿ ಬ್ರಿಟಿಶ್ ತೈಲ ಸಂಸ್ಥೆ ಸಲ್ಲಿಸಿದ ಅರ್ಜಿ ಸ್ವೀಕೃತವಾಗದ ಹಿನ್ನೆಲೆಯಲ್ಲಿ ಭಾರತ ಆದಾಯ ತೆರಿಗೆ ಇಲಾಖೆ ಈ ಕಠಿಣ ಆದೇಶ ನೀಡಿದೆ.

ಕೈರ್ನ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪೆನಿ ಉಪಸಂಸ್ಥೆ ಕೈರ್ನ್ ಇಂಡಿಯಾ (ಈಗ ವೇದಾಂತ ಲಿಮಿಟೆಡ್ ಎಂದು ಕರೆಯಲಾಗುತ್ತದೆ)ಯಾದಲ್ಲಿ ಕೈರ್ನ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪೆನಿ ಹೂಡಿದ ಬಂಡವಾಳದ 104 ದಶಲಕ್ಷ ಡಾಲರ್ ಡಿವಿಡೆಂಟ್ ಹಾಗೂ 1,500 ಕೋಟಿ ರೂಪಾಯಿ ತೆರಿಗೆ ವಿನಾಯಿತಿ ಹಿಂದೆ ನೀಡುವಂತೆ ಆದಾಯ ತೆರಿಗೆ ಇಲಾಖೆ ಆದೇಶಿಸಿದೆ.

ಕೈರ್ನ್ ಎನರ್ಜಿ ಕೈರ್ನ್ ಇಂಡಿಯಾದಲ್ಲಿ ಹೂಡಿದ 9.8 ಬಂಡವಾಳವನ್ನು ಹಿಂದೆ ಪಡೆಯಲು ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಆದಾಯ ತೆರಿಕೆ ಇಲಾಖೆಯ ಈ ಕ್ರಮವನ್ನು ಕೈರ್ನ್ ಎನರ್ಜಿ ತನ್ನ ಇ-ಮೇಲ್ ಹೇಳಿಕೆಯಲ್ಲಿ ದೃಢೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News