ಉತ್ತರ ಕೊರಿಯಾದಲ್ಲಿ ದೌರ್ಜನ್ಯಕ್ಕೊಳಗಾಗಿ ಕೋಮಾದಲ್ಲಿದ್ದ ಅಮೆರಿಕದ ಯುವಕ ಮೃತ್ಯು

Update: 2017-06-20 07:43 GMT

ವಾಷಿಂಗ್ಟನ್, ಜೂ.20: ಉತ್ತರ ಕೊರಿಯಾದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ದಿಗ್ಬಂಧನದಲ್ಲಿದ್ದ ಹಾಗೂ ಕಳೆದ ವಾರ ಕೋಮಾ ಸ್ಥಿತಿಯಲ್ಲಿ ಸಿನ್ಸಿನ್ನಾಟಿಗೆ ಹಿಂದಕ್ಕೆ ಕಳುಹಿಸಲ್ಪಟ್ಟಿದ್ದ ಯುನಿವರ್ಸಿಟಿ ಆಫ್ ವರ್ಜೀನಿಯಾದ ವಿದ್ಯಾರ್ಥಿ ಒಟ್ಟೊ ವಾರಂಬಿಯರ್ ಸೋಮವಾರ ಮೃತಪಟ್ಟಿದ್ದಾನೆಂದು ಆತನ ಹೆತ್ತವರು ತಿಳಿಸಿದ್ದಾರೆ.

ಉತ್ತರ ಕೊರಿಯಾದಲ್ಲಿ ಅನುಭವಿಸಿದ ಭಯಾನಕ ಹಿಂಸೆ ಹಾಗೂ ದೌರ್ಜನ್ಯದಿಂದಾಗಿ ತಮ್ಮ ಮಗ ಸಾವನ್ನಪ್ಪಿದ್ದಾನೆಂದು ಆತನ ದುಃಖತಪ್ತ ಹೆತ್ತವರಾದ ಫ್ರೆಡ್ ಮತ್ತು ಸಿಂಡಿ ವಾರಂಬಿಯರ್ ಹೇಳಿದ್ದಾರೆ. ಒಟ್ಟೊ ಉತ್ತರ ಕೊರಿಯಾದಿಂದ ಕೊಲೆಗೀಡಾಗಿದ್ದಾನೆಂದೇ ಹಲವರು ಆರೋಪಿಸಿದ್ದಾರೆ.

ಒಟ್ಟೊ ಹಾಂಗ್ ಕಾಂಗ್ ಗೆ ಶಿಕ್ಷಣದ ಉದ್ದೇಶಕ್ಕಾಗಿ ಹೋಗುವ ದಾರಿಯಲ್ಲಿ ಉತ್ತರ ಕೊರಿಯಾಗೆ ಪ್ರವಾಸಿಯಾಗಿ ತೆರಳಿದ್ದರು. ಆದರೆ ಅವರು ಅಲ್ಲಿಂದ ಹಿಂದಿರುಗಬೇಕೆನ್ನುವಷ್ಟರಲ್ಲಿ ಅವರನ್ನು ತಡೆಯಲಾಗಿತ್ತು. ವಿಚಾರಣೆಯ ನಂತರ ಅವರಿಗೆ 15 ವರ್ಷಗಳ ಕಠಿಣ ಶ್ರಮದ ಶಿಕ್ಷೆ ವಿಧಿಸಲಾಗಿತ್ತು. ಉತ್ತರ ಕೊರಿಯಾ ಅಮೆರಿಕನ್ ಪ್ರವಾಸಿಗರನ್ನು ಆಕರ್ಷಿಸಿ ನಂತರ ಅವರನ್ನು ತಮ್ಮ ಮಗನಿಗೆ ಮಾಡಿದಂತೆ ದಿಗ್ಭಂಧನ ವಿಧಿಸುತ್ತದೆ ಎಂದು ಫ್ರೆಡ್ ಹೇಳಿದ್ದಾರೆ.

ಒಟ್ಟೊ ಯಂಗ್ ಪಯೊನೀರ್ ಟೂರ್ಸ್‌ ಮುಖಾಂತರ ಹೋಗಿದ್ದರೆ ಆ ಸಂಸ್ಥೆ ತಾನು ಇನ್ನು ಮುಂದೆ ಅಮೆರಿಕನ್ನರನ್ನು ಉತ್ತರ ಕೊರಿಯಾಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಹೇಳಿದೆ.

ಕಳೆದೊಂದು ವರ್ಷದಿಂದ ಒಟ್ಟೊ ಎಲ್ಲಿದ್ದಾರೆಂದು ಆತನ ಕುಟುಂಬಕ್ಕೆ ತಿಳಿದಿರಲಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಅವರು ಕಳೆದೊಂದು ವರ್ಷದಿಂದ ಕೋಮಾದಲ್ಲಿದ್ದರೆಂದು ತಿಳಿದು ಬಂದಿತ್ತು. ಮಂಗಳವಾರ ಆರೋಗ್ಯ ಕಾರಣಗಳಿಗಾಗಿ ಒಟ್ಟೊರನ್ನು ಉತ್ತರ ಕೊರಿಯಾ ಬಿಡುಗಡೆಗೊಳಿಸಿತ್ತು.ಒಟ್ಟೊರನ್ನು ಪರೀಕ್ಷಿಸಿದ್ದ ವೈದ್ಯರು ಻ವರ ಮಿದುಳಿಗೆ ತೀವ್ರ ಹಾನಿಯಾಗಿದೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News