ಖ್ಯಾತ ಬಾಲಿವುಡ್ ನಟ ಅಮ್ರಿತ್ ಪಾಲ್ ವಿಧಿವಶ

Update: 2017-06-20 12:29 GMT

ಹೊಸದಿಲ್ಲಿ, ಜೂ.20: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಬಾಲಿವುಡ್ ನಟ ಅಮ್ರಿತ್ ಪಾಲ್ ತಮ್ಮ ಸ್ವಗೃಹದಲ್ಲಿ ನಿಧನರಾದರು,

ವಿನೋದ್ ಖನ್ನಾ, ಧರ್ಮೇಂದ್ರ, ಮಿಥುನ್ ಚಕ್ರವರ್ತಿ, ಅನಿಲ್ ಕಪೂರ್ ಮುಂತಾವರ ಚಿತ್ರದಲ್ಲಿ ನಟಿಸಿದ್ದ ಅಮ್ರಿತ್ ಪಾಲ್ ಖಳನಾಯಕನ ಪಾತ್ರದಲ್ಲೇ ಹೆಚ್ಚಾಗಿ ಅಭಿನಯಿಸುತ್ತಿದ್ದರು.

“ಹಲವು ಸಮಯಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಹಾಸಿಗೆ ಹಿಡಿದಿದ್ದರು. ,ಕೆಲ ದಿನಗಳ ಹಿಂದಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಮರಳಿ ಮನೆಗೆ ಕರೆತರಲಾಗಿತ್ತು. ಆದರೆ ಅನಾರೋಗ್ಯ ಉಲ್ಬಣಗೊಂಡು ಮನೆಯಲ್ಲೇ ಮೃತಪಟ್ಟರು ಎಂದು ಪಾಲ್ ಅವರ ಪುತ್ರಿ ಗೀತಾ ತಿಳಿಸಿದ್ದಾರೆ.

ಜೀತೇಂದ್ರ ಹಾಗೂ ಶ್ರೀದೇವಿ ಅಭಿನಯದ “ಜಾಲ್” ಚಿತ್ರದಲ್ಲಿ ಖಳನಾಯಕನಾಗಿ ಮೊದಲಬಾರಿಗೆ ಅವರು ನಟಿಸಿದ್ದರು. ಮಿಥುನ್ ಚಕ್ರವರ್ತಿ ಹಾಗೂ ಪೂನಮ್ ಧಿಲೋನ್ ನಟನೆಯ “ಪ್ಯಾರ್ ಕೆ ದೋ ಪಲ್ “ ಚಿತ್ರದಲ್ಲಿ ಅಮ್ರಿತ್ ನಟನೆ ಪ್ರಶಂಸೆಗೆ ಪಾತ್ರವಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News