ಜಿಎಸ್‌ಟಿ ಪರಿಣಾಮ ಕ್ರೆಡಿಟ್ ಕಾರ್ಡ್ ಪಾವತಿ , ಜೀವವಿಮೆ ಕಂತು ದುಬಾರಿ

Update: 2017-06-20 15:27 GMT

ಹೊಸದಿಲ್ಲಿ, ಜೂ.20: ಜುಲೈ 1ರಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ಪರಿಣಾಮ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವವರು, ಜೀವ ವಿಮೆ ಕಂತು ಪಾವತಿಸುವವರು ಹೆಚ್ಚಿನ ತೆರಿಗೆ ಪಾವತಿಸಬೇಕಾಗುತ್ತದೆ.

   ಈಗ ಗ್ರಾಹಕರು ಇಂತಹ ಸೇವೆಗಳಿಗೆ ಶೇ.15ರಷ್ಟು ಸೇವಾ ತೆರಿಗೆ ಪಾವತಿಸುತ್ತಿದ್ದಾರೆ. ಜಿಎಸ್‌ಟಿ ಜಾರಿಗೊಂಡ ಬಳಿಕ ಇದು ಶೇ.18ರಷ್ಟಾಗಬಹುದು ಎಂದು ಎಸ್‌ಬಿಐ ಕಾರ್ಡ್ ತನ್ನ ಗ್ರಾಹಕರಿಗೆ ಕಳಿಸಿದ ಎಸ್ಸೆಮ್ಮೆಸ್ ಸಂದೇಶದಲ್ಲಿ ತಿಳಿಸಲಾಗಿದೆ.

ಸ್ಟಾಂಡರ್ಡ್ ಚಾರ್ಟರ್ಡ್ , ಎಚ್‌ಡಿಎಫ್‌ಸಿ ಮುಂತಾದ ಬ್ಯಾಂಕ್‌ಗಳೂ ಗ್ರಾಹಕರಿಗೆ ಇದೇ ರೀತಿಯ ಸಂದೇಶ ರವಾನಿಸಿವೆ.

    ಐಸಿಐಸಿಐ ಪ್ರುಡೆನ್ಶಿಯಲ್ ಇನ್ಷೂರೆನ್ಸ್ ಸಂಸ್ಥೆ ಗ್ರಾಹಕರಿಗೆ ಕಳಿಸಿರುವ ಇ-ಮೇಲ್ ಸಂದೇಶದಲ್ಲಿ - ಜಿಎಸ್‌ಟಿ ಜಾರಿಗೆ ಬಂದ ಬಳಿಕ ಕಾಲಾವಧಿ ವಿಮಾಪಾಲಿಸಿ ಮತ್ತು ಯುನಿಟ್ ಸಂಯೋಜಿತ ವಿಮಾ ಪಾಲಿಸಿಗಳ ಮೇಲೆ ಶೇ.18ರಷ್ಟು ತೆರಿಗೆ ವಿಧಿಸಲಾಗುವುದು ಎಂದು ತಿಳಿಸಿದೆ. ಈಗ ಈ ಪಾಲಿಸಿಗಳ ಮೇಲೆ ಶೇ.15ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಎಂಡೋಮೆಂಟ್ ವಿಮಾ ಪಾಲಿಸಿಗಳ ಮೇಲೆ ಈಗ ಶೇ.1.88ರಷ್ಟು ತೆರಿಗೆ ವಿಧಿಸಲಾಗುತ್ತಿದ್ದರೆ ಜಿಎಸ್‌ಟಿ ಜಾರಿಗೊಂಡ ಬಳಿಕ ಅದು ಶೇ.2.25ರಷ್ಟು ಆಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News