'ಟ್ಯೂಬ್ ಲೈಟ್' ಚಿತ್ರದಲ್ಲಿ ಸಲ್ಮಾನ್-ಶಾರೂಕ್ ಜುಗಲ್ಬಂದಿ!

Update: 2017-06-20 16:30 GMT

ಹೊಸದಿಲ್ಲಿ, ಜೂ.20: ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಟ್' ಚಿತ್ರ ಜೂನ್ 23ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಅವರ ಸಹೋದರ ಸೊಹೈಲ್ ಖಾನ್  ಕೂಡ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಈ ಚಿತ್ರದಲ್ಲಿ ಶಾರೂಕ್ ಖಾನ್ ಕೂಡ ಅಭಿನಯಿಸಲಿದ್ದಾರೆ. ಅತಿಥಿ ಪಾತ್ರದಲ್ಲಿ ಶಾರೂಕ್ 'ಟ್ಯೂಬ್ ಲೈಟ್' ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ಈ ಬಗ್ಗೆ ಸಲ್ಮಾನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, 'ಟ್ಯೂಬ್ ಲೈಟ್' ಚಿತ್ರ ತಮ್ಮ ಮಹತ್ವಾಕಾಂಕ್ಷೆ ಚಿತ್ರವಾಗಿದ್ದು ಇದರಲ್ಲೊಂದು ಪಾತ್ರವನ್ನು ಮಾಡಬೇಕು ಎಂದು ಶಾರೂಕ್ ಖಾನ್ ಅವರಲ್ಲಿ ಕೇಳಿಕೊಂಡಿದ್ದೆ. ತನ್ನ ಫೋನ್ ಕಾಲ್ ಸ್ವೀಕರಿಸಿದ್ದೇ ತಡ ಆ ಪಾತ್ರದಲ್ಲಿ ಅಭಿನಯಿಸುವುದಾಗಿ ಶಾರೂಕ್ ಖಾನ್ ಹೇಳಿಬಿಟ್ಟಿದ್ದರು ಎಂದು ಸಲ್ಮಾನ್ ಖಾನ್ ಹೇಳಿಕೊಂಡಿದ್ದಾರೆ.

ಭಾರತ ಪಾಕಿಸ್ತಾನ ನಡುವೆ 1962ರಲ್ಲಿ ನಡೆದ ಸಮರದ ಸನ್ನಿವೇಶವನ್ನು ಹೊತ್ತಿರುವ ಕಥಾವಸ್ತುವೇ 'ಟ್ಯೂಬ್ ಲೈಟ್' ಚಿತ್ರದ ಜೀವಾಳ. ಈ ಚಿತ್ರ ಇದೇ ತಿಂಗಳ 23ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News