ಕೇರಳದಲ್ಲಿ ತೀವ್ರಗೊಂಡ ಜ್ವರದ ಹಾವಳಿ: ಈ ತಿಂಗಳಲ್ಲಿ 32 ಸಾವು

Update: 2017-06-22 12:05 GMT

ತಿರುವನಂತಪುರಂ,ಜೂ. 22: ಕೇರಳದಾದ್ಯಂತ ಜ್ವರದ ಹಾವಳಿ ತೀವ್ರವಾಗಿದ್ದು ರಾಜ್ಯಸರಕಾರದ ಲೆಕ್ಕ ಪ್ರಕಾರ 218 ಮಂದಿ ಆರು ತಿಂಗಳಲ್ಲಿ ಜ್ವರ ಬಾಧೆಯಿಂದ ನಿಧನರಾಗಿದ್ದಾರೆ. ಜೂನ್‌ನಲ್ಲಿ 32 ಮಂದಿ ಮೃತಪಟ್ಟಿದ್ದಾರೆ. ಎಚ್1 ಎನ್1 ಬಾಧೆಯಿಂದ ಹೆಚ್ಚು ಮಂದಿ ಅಸುನೀಗಿದ್ದಾರೆ ಎಂದು ವರದಿಯಾಗಿದೆ. 55 ಮಂದಿ ಎಚ್1 ಎನ್1 ಬಾಧೆಯಿಂದ ಮೃತರಾದರು.

ಡೆಂಗ್‌ಗೆ 13 ಮಂದಿ, ಇಲಿಜ್ವರಕ್ಕೆ 9 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಒಂದು ದಿವಸದಲ್ಲೇ ಜ್ವರ ಪೀಡಿತರಾದ 25,000ಕ್ಕೂ ಅಧಿಕ ಮಂದಿ ಸರಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಇವರಲ್ಲಿ 138 ಮಂದಿಗೆ ಡೆಂಗ್‌ಜ್ವರ, ಎಂಟು ಮಂದಿಗೆ ಎಚ್1 ಎನ್1 ಬಾಧಿಸಿರುವುದು ದೃಢವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದವರ ಲೆಕ್ಕ ಸೇರಿಸಿದರೆ ರೋಗಪೀಡಿತರ ಸಂಖ್ಯೆ ಹೆಚ್ಚಾಗಬಹುದು.

ಇದೇವೇಳೆ ಜ್ವರ ಬಾಧಿತ ಪ್ರದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಿ, ಹೆಚ್ಚು ಜ್ವರ ಇರುವ ಸ್ಥಳಗಳಲ್ಲಿ ಹೆಚ್ಚು ವೈದ್ಯರನ್ನು ನೇಮಕಗೊಳಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ತೀವ್ರರೋಗಪೀಡಿತ, ಮಧ್ಯಮ ಮತ್ತು ಕಡಿಮೆ ಜ್ವರಪೀಡಿತ ಹೀಗೆ ಮೂರು ಭಾಗಗಳಾಗಿ ರೋಗ ಪೀಡಿತ ಪ್ರದೇಶಗಳನ್ನು ವಿಂಗಡಿಸಲಾಗಿದೆ. ರೋಗಪ್ರತಿರೋಧಕ ಕೆಲಸಗಳಿಗಾಗಿ ಯೋಜನಾನಿಧಿಯಿಂದ ಸ್ಥಳೀಯಾಡಳಿತಗಳು ಹಣ ತೆಗೆಯಬಹುದು ಎಂದು ಸರಕಾರ ಅನುಮತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News