ಜನಾಂಗೀಯ ತಾರತಮ್ಯ: ಇನ್ಫೋಸಿಸ್ ವಿರುದ್ಧ ಅಮೆರಿಕದಲ್ಲಿ ಪ್ರಕರಣ ದಾಖಲು

Update: 2017-06-22 12:12 GMT

ಬೆಂಗಳೂರು,ಜೂ. 22: ದಕ್ಷಿಣ ಏಷ್ಯನ್ನರಲ್ಲದ ಜನರೊಂದಿಗೆ ತಾರತಮ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಅಮೆರಿಕದ ಇನ್ಫೋಸಿಸ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಕಂಪೆನಿಯ ಮಹಿಳಾ ಉದ್ಯೋಗಿ ಎರಿಕ್ ಗ್ರೀನ್ ದೂರು ನೀಡಿದ್ದಾರೆ.

ಜೂನ್ 19ಕ್ಕೆ ಟೆಕ್ಸಾಸ್‌ನ ಜಿಲ್ಲಾ ನ್ಯಾಯಾಲಯದಲ್ಲಿ ದೂರು ನೀಡಲಾಗಿದೆ. ಕಂಪೆನಿಯ ಹಿರಿಯ ಅಧಿಕಾರಿಗಳಾದ ವಾಸದೇವ ನಾಯಕ್, ಬಿನೋದ್ ಹಂಪಾಪುರ್ ಜನಾಂಗೀಯ ತಾರತಮ್ಯ ವೆಸಗುತ್ತಿದ್ದಾರೆ ಎಂದು ಎರಿಕ್ ದೂರಿನಲ್ಲಿ ತಿಳಿಸಿದ್ದಾರೆ. ರಾಷ್ಟ್ರೀಯತೆ, ಜನಾಂಗೀಯತೆ ಹೆಸರಿನಲ್ಲಿಇವರು ದಕ್ಷಿಣ ಏಷ್ಯನರಲ್ಲದವರು, ವಿಶೇಷವಾಗಿ ಭಾರತೀಯರಲ್ಲದ ಇತರ ಉದ್ಯೋಗಿಗಳೊಂದಿಗೆ ತಾರತಮ್ಯ ಎಸಗುತ್ತಿದ್ದಾರೆ, ಹೀಗಾಗಿ ಎರಿಕ್ ಗ್ರೀನ್‌ರು ಕೆಲಸ ಕಳಕೊಳ್ಳಬೇಕಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹೊರಗುತ್ತಿಗೆ ಒಪ್ಪಂದ ವಿರುದ್ಧ ಅಮೆರಿಕದಲ್ಲಿ ಜನಾಕ್ರೋಶ ಸೃಷ್ಟಿಯಾಗಿದ್ದು, ಈ ವಿಷಯದಲ್ಲಿ ಟ್ರಂಪ್ ಸರಕಾರ ಹೊಸ ಕ್ರಮಗಳನ್ನು ಆರಂಭಿಸಿರುವ ಹಿನ್ನೆಲೆಯಲ್ಲಿ ಜನಾಂಗೀಯ ತಾರತಮ್ಯ ಆರೋಪವನ್ನು ಹೊರಿಸಿ ಕೇಸು ದಾಖಲಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕದ 10,000 ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಇನ್ಫೋಸಿಸ್ ಘೋಷಿಸಿತ್ತು;.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News