ರಾಷ್ಟ್ರಪತಿ ಚುನಾವಣೆ: ಜೂನ್ 23 ರಂದು ಕೋವಿಂದ ನಾಮಪತ್ರ ಸಲ್ಲಿಕೆ

Update: 2017-06-22 13:20 GMT

ಹೊಸದಿಲ್ಲಿ,ಜೂ.22: ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿರುವ ರಾಮನಾಥ ಕೋವಿಂದ ಅವರು ಶುಕ್ರವಾರ ತನ್ನ ನಾಮಪತ್ರವನ್ನು ಸಲ್ಲಿಸುವ ಸಂದರ್ಭ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಮುಖ್ಯಮಂತ್ರಿಗಳಾದ ಎನ್.ಚಂದ್ರಬಾಬು ನಾಯ್ಡು, ಕೆ.ಚಂದ್ರಶೇಖರ ಮತ್ತು ಇ.ಪಳನಿಸ್ವಾಮಿ ಅವರು ಉಪಸ್ಥಿತರಿರುತ್ತಾರೆ.

ಬಿಜೆಪಿಯು ಜು.17ರಂದು ನಡೆಯಲಿರುವ ರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿಯನ್ನಾಗಿ ಕೋವಿಂದ ಅವರನ್ನು ಘೋಷಿಸಿದ್ದ ಬೆನ್ನಿಗೇ ನಾಯ್ಡು ಅವರ ತೆಲುಗು ದೇಶಂ ಪಾರ್ಟಿ ಮತ್ತು ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿ ತಮ್ಮ ಬೆಂಬಲದ ಕೊಡುಗೆಯನ್ನು ನೀಡಿದ್ದವು. ಟಿಡಿಪಿ ಎನ್‌ಡಿಎದ ಘಟಕವಾಗಿದೆ.

  ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇಡೀ ಕೇಂದ್ರ ಸಂಪುಟ,ದೇಶಾದ್ಯಂತದ ಎನ್‌ಡಿಎ ಮುಖ್ಯಮಂತ್ರಿಗಳು, ಸಂಸದರು ಮತ್ತು ಶಾಸಕರು ಕೋವಿಂದ ಅವರ ಉಮೇದುವಾರಿಕೆಗೆ ಸೂಚಕರು ಮತ್ತು ಅನುಮೋದಕರಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News