×
Ad

ಪ್ರಾದೇಶಿಕ ಭದ್ರತೆಯನ್ನು ಹೆಚ್ಚಿಸಲು ಭಾರತ-ಆಸಿಯಾನ್ ಪ್ರಯತ್ನ:ಸುಷ್ಮಾ

Update: 2017-06-22 19:21 IST

ಹೊಸದಿಲ್ಲಿ,ಜೂ.22: ಹೊಸದಾಗಿ ಎದುರಾಗುತ್ತಿರುವ ಸವಾಲುಗಳಿಗೆ ಸಂಘಟಿತ ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಪ್ರಾದೇಶಿಕ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ಶ್ರಮಿಸುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಗುರುವಾರ ಇಲ್ಲಿ ಹೇಳಿದರು.

ಪ್ರಬಲ ಆಸಿಯಾನ್ ರಾಷ್ಟ್ರಗಳೊಂದಿಗೆ ಭಾರತದ ವ್ಯೆಹಾತ್ಮಕ ಪಾಲುದಾರಿಕೆಯ ವಿವಿಧ ಮಗ್ಗಲುಗಳನ್ನು ಚರ್ಚಿಸಿದ ಅವರು, ಎರಡು ವರ್ಷಗಳ ಮಂದಗತಿಯ ಬಳಿಕ 2016-17ರಲ್ಲಿ ಶೇ.8ರಷ್ಟು ಏರಿಕೆಯೊಂದಿಗೆ ಭಾರತ-ಆಸಿಯಾನ್ ವ್ಯಾಪಾರ ಹಳಿಗೆ ಮರಳಿದೆ ಎಂದರು.

 ಚಿಂತನ ಚಿಲುಮೆ ‘ರೀಸರ್ಚ್ ಅ್ಯಂಡ್ ಇನ್ಫಾರ್ಮೇಷನ್ ಸಿಸ್ಟಮ್ಸ್’ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಗೆ ಆರ್ಥಿಕ ನೆರವು, ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆ, ಮಾನವ ಕಳ್ಳಸಾಗಣೆ, ಹಣ ಚಲುವೆ ಮತ್ತು ಸೈಬರ್ ಅಪರಾಧಗಳು ಪ್ರದೇಶವನ್ನು ಕಾಡುತ್ತಿರುವ ಪ್ರಮುಖ ಸವಾಲುಗಳಾಗಿವೆ ಮತ್ತು ಅವುಗಳನ್ನು ಎದುರಿಸಲು ಯೋಜನೆ ರೂಪಿಸುವ ನಿಟ್ಟಿನಲ್ಲಿ ಭಾರತ ಮತ್ತು ಆಸಿಯಾನ್ ಕೆಲಸ ಮಾಡುತ್ತಿವೆ ಎಂದರು.

ಸಾಗರ ಸಹಕಾರ ಮತ್ತು ಸುರಕ್ಷತೆ ಭಾರತ ಮತ್ತು ಆಸಿಯಾನ್ ಗಮನ ಹರಿಸಬೇಕಾದ ಪ್ರಮುಖ ಕ್ಷೇತ್ರಗಳಲ್ಲೊಂದಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News