ಸಿಬಿಎಸ್‌ಇ: ಅಂಕ ದೃಢೀಕರಣ,ಉತ್ತರಪತ್ರಿಕೆ ಪ್ರತಿಗೆ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ

Update: 2017-06-23 13:04 GMT

ಹೊಸದಿಲ್ಲಿ,ಜೂ.23: 2017ನೇ ಸಾಲಿನ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳಿಗೆ ಹಾಜರಾಗಿದ್ದ ವಿದ್ಯಾರ್ಥಿಗಳು ತಮ್ಮ ಅಂಕಗಳ ದೃಢೀಕರಣ ಮತ್ತು ಉತ್ತರ ಪತ್ರಿಕೆಗಳ ಛಾಯಾಪ್ರತಿಗಳನ್ನು ಕೋರಿ ಅರ್ಜಿ ಸಲ್ಲಿಸಲು ಗಡುವನ್ನು ಸಿಬಿಎಸ್‌ಇ ವಿಸ್ತರಿಸಿದೆ.

10 ಮತ್ತು 12ನೇ ತರಗತಿಗಳಿಗೆ ಗ್ರೇಡ್/ಅಂಕಗಳ ಪುನರ್‌ತಪಾಸಣೆ/ದೃಢೀಕರ ಣಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜೂ.27ರವರೆಗೆ ಮತ್ತು ಉತ್ತರ ಪತ್ರಿಕೆಗಳ ಛಾಯಾಪ್ರತಿಗಳನ್ನು ಕೋರಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.

ಸಿಬಿಎಸ್‌ಇ ದೃಢೀಕರಣ ಪ್ರಕ್ರಿಯೆಯಲ್ಲಿ ಹಲವಾರು ಅಸಮಂಜಸತೆಗಳಿರುವ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ದೂರಿಕೊಂಡಿರುವ ಹಿನ್ನೆಲೆಯಲ್ಲಿ ಮಂಡಳಿಯು ಗಡುವು ವಿಸ್ತರಣೆಯ ನಿರ್ಧಾರವನ್ನು ಕೈಗೊಂಡಿದೆ.

ಮರು ವೌಲ್ಯಮಾಪನ ಪ್ರಕ್ರಿಯೆಯನ್ನು ಕೈಬಿಡುತ್ತಿರುವುದಕ್ಕಾಗಿ ದಿಲ್ಲಿ ಉಚ್ಚ ನ್ಯಾಯಾಲಯವು ಕೂಡ ಇತ್ತೀಚಿಗೆ ಸಿಬಿಎಸ್‌ಇ ಅನ್ನು ಕಟುವಾಗಿ ಟೀಕಿಸಿತ್ತು.

ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶವನ್ನು ಮೇ 28ರಂದು ಮತ್ತು 10ನೇ ತರಗತಿಯ ಫಲಿತಾಂಶವನ್ನು ಜೂನ್ 3ರಂದು ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News