ಪ್ರಿನ್ಸ್ ಸ್ಪೈಡರ್ ಹವಾ

Update: 2017-06-23 16:36 GMT

ಪ್ರಿನ್ಸ್ ಮಹೇಶ್‌ಬಾಬು ಹಾಗೂ ‘ಗಜನಿ’ ಮುರುಗದಾಸ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಸ್ಪೈಡರ್, ಚಿತ್ರರಸಿಕರಲ್ಲಿ ಕ್ರೇಝ್ ಸೃಷ್ಟಿಸಿದೆ. ಹೌದು. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಟೀಸರನ ಕೆಲವು ದೃಶ್ಯಗಳ ಅತ್ಯಂತ ಅದ್ಭುತವಾಗಿ ಮೂಡಿಬಂದಿವೆ. ಸ್ಪೈಡರ್‌ನ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಎರಡು ಹಾಡುಗಳ ಶೂಟಿಂಗ್ ಅಷ್ಟೇ ಬಾಕಿಯಿದೆಯಂತೆ. ತಾಂತ್ರಿಕವಾಗಿ ಚಿತ್ರ ಅತ್ಯಂತ ರಿಚ್ ಆಗಿದ್ದು, ಹಾಲಿವುಡ್ ಸಿನೆಮಾಗಳನ್ನು ಸರಿಗಟ್ಟುವಂತಹ ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.

ಚಿತ್ರದ ಟೀಸರ್‌ನಲ್ಲಿ ತನ್ನ ಹೆಗಲ ಮೇಲೆ ನಿಧಾನವಾಗಿ ಏರುವ ರೊಬೋಟ್ ಚೇಳನ್ನ ನಾಯಕ ಮಹೇಶ್ ಬಾಬು ಸುಮ್ಮನಿರುವಂತೆ ಸನ್ನೆ ಮಾಡುವ ದೃಶ್ಯ, ಅವರ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಟಾಲಿವುಡ್‌ನ ಜನಪ್ರಿಯ ನಟಿ ರಾಕುಲ್ ಪ್ರೀತ್ ಸಿಂಗ್ ಚಿತ್ರದ ನಾಯಕಿ. ಎಲ್ಲಾ ಸರಿಹೋದಲ್ಲಿ ಸ್ಪೈಡರ್ ಡಿಸೆಂಬರ್ 29ರಂದು ಚಿತ್ರಮಂದಿರಗಳಲ್ಲಿ ಹರಿದಾಡಲಿದೆ.

ಇತ್ತ ಸ್ಪೈಡರ್ ನಿರ್ಮಾಣ ಪೂರ್ಣಗೊಳ್ಳುವ ಹಂತ ತಲುಪಿರುವಾಗಲೇ ಮಹೇಶ್ ಬಾಬು ಹೊಸ ಚಿತ್ರದಲ್ಲಿ ನಟಿಸಲು ತಯಾರಿ ನಡೆಸತೊಡಗಿದ್ದ್ಜಾರೆ. ಕೋರಟಾಲಾ ಶಿವ ನಿರ್ದೇಶನದಲ್ಲಿ ಭಾರತ್ ಏ ನೇನು ತೆಲುಗು ಚಿತ್ರದಲ್ಲಿ ನಟಿಸಲು ಗ್ರೀನ್‌ಸಿಗ್ನಲ್ ಕೊಟ್ಟಿದ್ದ್ಜಾರೆ. ಪಕ್ಕಾ ರಾಜಕೀಯ ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿರುವ ಈ ಚಿತ್ರದಲ್ಲಿ ಮಹೇಶ್ ಡೇರಿಂಗ್ ಸಚಿವನ ಪಾತ್ರದಲ್ಲಿ ನಟಿಸಲಿದ್ದ್ಜಾರೆ. ಉದಯೋನ್ಮುಖ ನಟಿ ಕಿಯಾರಾ ಅಡ್ವಾಣಿ ನಾಯಕಿ. ಖ್ಯಾತ ತಮಿಳು ನಟ ಶರತ್ ಕುಮಾರ್ ಕೂಡಾ ಮುಖ್ಯ ಪಾತ್ರದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News