×
Ad

'ತಾರಾಕಾಸುರ'ನ ಸಮ್ಮುಖದಲ್ಲಿ

Update: 2017-06-23 23:19 IST

'ರಥಾವರ'ದ ಬಳಿಕ ಮತ್ತೊಂದು ದೊಡ್ಡ ಚಿತ್ರದೊಂದಿಗೆ ಮರಳಿದ್ದಾರೆ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ. 'ತಾರಾಕಾಸುರ' ಎಂಬ ಹೊಸ ಚಿತ್ರದಲ್ಲಿ ಚಿತ್ರದ ನಿರ್ಮಾಪಕ ನರಸಿಂಹರ ಪುತ್ರ ವೈಭವ್ ನನ್ನು ನಾಯಕರನ್ನಾಗಿಸಲಾಗಿದೆ.

ಇದು ಅಳಿವಿನಂಚಿನ ಜಾನಪದ ಕಲೆಯ, ಜನಾಂಗದ ಕುರಿತಾದ ಚಿತ್ರವಾಗಿದ್ದು, ಅಂಥದೊಂದು ಜನಾಂಗದ ಮುಖಂಡರಾಗಿ ಕರಿಸುಬ್ಬು ನಟಿಸುತ್ತಿದ್ದಾರೆ. 
ಕಾಳಿಂಗ ಎಂಬ ಪ್ರಮುಖ ಖಳನ ಪಾತ್ರದಲ್ಲಿ 'ಸಿಂಗಂ2' ಖ್ಯಾತಿಯ ಡ್ಯಾನಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕಾಗಿ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಿ ಕರೆಸಲಾಗಿದೆಯೆಂದು ಸುದ್ದಿ. ಈಗಾಗಲೇ ತಲಕಾಡು ಮರಳಿನಲ್ಲಿ ಮರಳುದಂಧೆಯ ಹೊಡೆದಾಟದ ಸನ್ನಿವೇಶವನ್ನು ಚಿತ್ರೀಕರಿಸಲಾಗಿದೆಯಂತೆ.  ಕನ್ನಡ ಚಿತ್ರದ ಇಮ್ಯಾಜಿನಿಶೇನ್, ಕ್ರಿಯೇಟಿವಿಟಿ ಚೆನ್ನಾಗಿದೆ ಎಂದ ಡ್ಯಾನಿ ಭಾರತೀಯರು ತನ್ನನ್ನು 'ಸಿಂಗಂ 2' ಭಾರತೀಯರು ಗುರುತಿಸುವಂತೆ ಮಾಡಿತು, ಪ್ರಸ್ತುತ ಚಿತ್ರಕ್ಕಾಗಿ ಹೊಸ ಸ್ಟಂಟ್ ಕಲಿಯುತ್ತಿರುವುದಾಗಿ ಹೇಳಿದರು. ಚಿತ್ರೀಕರಣದ ಜಾಗಕ್ಕೆ ಭೇಟಿ ನೀಡಿದ ಮಾಧ್ಯಮ ತಂಡಕ್ಕೆ ಕುಂಭಮೇಳದಂಥ ದೃಶ್ಯವೊಂದರ ಶೂಟಿಂಗ್ ನಡೆಸುತ್ತಿರುವುದಾಗಿ ನಿರ್ದೇಶಕರು ತಿಳಿಸಿದರು.

ನಾಯಕ ವೈಭವ್ ತಾವು ಮೂರು ಶೇಡ್ ನಲ್ಲಿ ಕಾಣಿಸಲಿರುವುದಾಗಿ ಹೇಳಿದರು. ಅವುಗಳ್ಲೊಂದು16ರ ಹುಡುಗ ಮತ್ತೊಂದು ಸ್ಟೈಲಿಶ್ ಕ್ಯಾರೆಕ್ಟರ್ ಹಾಗೆ ಇನ್ನೊಂದು ದಾಡಿ ಬಿಟ್ಟ ಪಾತ್ರವೆಂದು ಅವರು ವಿವರಿಸಿದರು.

ವಿಶೇಷ ಪಾತ್ರದಲ್ಲಿ ಎಂ ಕೆ ಮಠ

'ಗಜಕೇಸರಿ' ಚಿತ್ರದ ಬಳಿಕ ಮಾಸ್ ಚಿತ್ರಗಳಲ್ಲಿನ ವಿಶೇಷ ಪಾತ್ರಗಳೊಂದಿಗೆ ಸುದ್ದಿಯಾಗುತ್ತಿರುವವರು ಕಿರುತೆರೆ ನಿರ್ದೇಶಕ ಎಂ ಕೆ ಮಠ. ನಿರ್ದೇಶಕ ಟಿ ಎಸ್ ನಾಗಾಭರಣ ಶಿಷ್ಯರಾಗಿ ಹೆಸರಾಗಿರುವ ಇವರು 'ಮಾಸ್ತಿಗುಡಿ', 'ರಾಜಕುಮಾರ' ಮತ್ತು ಕಳೆದ ವಾರವಷ್ಟೇ ತೆರೆಕಂಡ 'ಟೈಗರ್' ಚಿತ್ರದ ಪಾತ್ರಗಳಿಂದ ಮನಸೆಳೆದಿದ್ದಾರೆ. ಚಿಕ್ಕ ಪಾತ್ರ ಸಿಕ್ಕರೂ ಗಮನಾರ್ಹವಾಗಿ ನಟಿಸುವ ಎಂ ಕೆ ಮಠ ಪ್ರಸ್ತುತ ಚಿತ್ರದಲ್ಲಿ ಒಳ್ಳೆಯದೊಂದು ಪಾತ್ರ ದೊರಕಿದ ಖುಷಿಯಲ್ಲಿದ್ದಾರೆ.

Writer - ಶಶಿಕರ ಪಾತೂರ್

contributor

Editor - ಶಶಿಕರ ಪಾತೂರ್

contributor

Similar News