ಜುಲೈ 17ರಿಂದ ಆಗಸ್ಟ್ 11ರ ತನಕ ಪಾರ್ಲಿಮೆಂಟ್ ನ ಮಳೆಗಾಲದ ಅಧಿವೇಶನ
Update: 2017-06-24 14:30 IST
ಹೊಸದಿಲ್ಲಿ, ಜೂ.24: ಪಾರ್ಲಿಮೆಂಟ್ ನ ಮಳೆಗಾಲದ ಅಧಿವೇಶನ ಜುಲೈ 17ರಿಂದ ಆಗಸ್ಟ್ 11ರ ತನಕ ನಡೆಯಲಿದೆ.
ಅಧಿವೇಶನದ ಮೊದಲ ದಿನವೇ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಗೃಹ ಸಚಿವ ರಾಜ್ ನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಪಿಎ) ಮಳೆಗಾಲದ ಅಧಿವೇಶನನ್ನು ಜುಲೈ 17ರಿಂದ ಆಗಸ್ಟ್ 11ರ ತನಕ ನಡೆಸಲು ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.