ನೇಪಾಳ, ಭೂತಾನ್‌ಗೆ ಪ್ರಯಾಣಿಸಲು 'ಆಧಾರ್' ಬೇಕಾಗಿಲ್ಲ: ಗೃಹ ಸಚಿವಾಲಯ

Update: 2017-06-25 11:53 GMT

ಹೊಸದಿಲ್ಲಿ, ಜೂ.25: ಭಾರತೀಯರು ನೇಪಾಳ ಹಾಗೂ ಭೂತಾನ್‌ಗೆ ಪ್ರಯಾಣಿಸಲು 'ಆಧಾರ್ ಕಾರ್ಡ್' ಗುರುತು ಪತ್ರವಾಗಿ ಪರಿಗಣಿಸಲ್ಪಡುವುದಿಲ್ಲ ಎಂದು ಕೇಂದ್ರ ಗೃಹಸಚಿವಾಲಯ ಸ್ಪಷ್ಟಪಡಿಸಿದೆ.

 ಭಾರತೀಯರು ನೇಪಾಳ ಹಾಗೂ ಭೂತಾನ್ ದೇಶಗಳಿಗೆ ಪ್ರಯಾಣಿಸಲು ಪಾಸ್‌ಪೊರ್ಟ್ ಅಥವಾ ಚುನಾವಣಾ ಆಯೋಗ ನೀಡುವ ಚುನಾವಣಾ ಗುರುತು ಪತ್ರ ನೀಡಿದರೆ ಸಾಕಾಗುತ್ತದೆ. ವೀಸಾದ ಅಗತ್ಯವಿರುವುದಿಲ್ಲ. 65 ವರ್ಷಕ್ಕಿಂತ ಹೆಚ್ಚಿನವರು ಹಾಗೂ 15 ವರ್ಷದೊಳಗಿನವರು ವಯಸ್ಸು ಹಾಗೂ ಗುರುತನ್ನು ದೃಢಪಡಿಸಲು ಫೋಟೊವಿರುವ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಪಾನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಕೇಂದ್ರ ಸರಕಾರದ ಆರೋಗ್ಯ ಸೇವೆ ಕಾರ್ಡ್ ಹಾಗೂ ರೇಶನ್ ಕಾರ್ಡ್ ತೋರಿಸಬೇಕಾಗುತ್ತದೆ. ಆದರೆ, ಆಧಾರ್ ಕಾರ್ಡ್‌ನ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ನೇಪಾಳ ಹಾಗೂ ಭೂತಾನ್‌ಗೆ ಪ್ರಯಾಣಿಸಲು ಆಧಾರ್ ಕಾರ್ಡ್‌ನ್ನು ಒಂದು ಪ್ರಯಾಣದ ದಾಖಲೆಯಾಗಿ ಸ್ವೀಕರಿಸುವುದಿಲ್ಲ ಎಂದು ಗೃಹ ಸಚಿವಾಲಯ ನೀಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ.

ನೇಪಾಳ  ಭಾರತದ ಐದು ರಾಜ್ಯಗಳಾದ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ ಹಾಗೂ ಉತ್ತರಾಖಂಡದ ಗಡಿಗಳನ್ನು ಹಂಚಿಕೊಂಡಿದೆ. ಭೂತಾನ್ ದೇಶ ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಗಡಿಭಾಗವನ್ನು ಹಂಚಿಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News