"ದಂಗಲ್"ನಿಂದ ಇನ್ನೊಂದು ಜಾಗತಿಕ ದಾಖಲೆ

Update: 2017-06-26 14:01 GMT

ಹೊಸದಿಲ್ಲಿ, ಜೂ.26: ಚೀನಾದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನಟ ಆಮಿರ್ ಖಾನ್ ಅಭಿನಯದ “ದಂಗಲ್” ಮತ್ತೊಂದು ಜಾಗತಿಕ ದಾಖಲೆ ನಿರ್ಮಿಸಿದೆ.

ಅತೀ ಹೆಚ್ಚು ಹಣ ಗಳಿಸಿದ ಇಂಗ್ಲಿಷ್ ಅಲ್ಲದ 5ನೆ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ “ದಂಗಲ್” ದೇಶಾದ್ಯಂತ 2 ಸಾವಿರ ಕೋಟಿಗೂ ಹೆಚ್ಚು ಆದಾಯ ಗಳಿಸಿದ ಮೊದಲ ಭಾರತೀಯ ಚಲಚಿತ್ರವಾಗಿ ಹೊರಹೊಮ್ಮಿದೆ. ಈ ಹಿಂದೆ ಯಾವ ಭಾರತೀಯ ಚಲನಚಿತ್ರವೂ ಈ ಸಾಧನೆ ಮಾಡಿಲ್ಲ. ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಜೀವನಕಥೆ ಆಧಾರಿತ “ದಂಗಲ್” ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News