ನಟಿ ಮತ್ತು ಪಲ್ಸರ್ ಸುನೀಲ್ ಪರಸ್ಪರ ಗೆಳೆಯರಾಗಿದ್ದರು: ನಟ ದಿಲೀಪ್
ಕೊಚ್ಚಿ, ಜೂ. 27: ಅಪಹರಣಕ್ಕೊಳಗಾಗಿದ್ದ ನಟಿ ಮತ್ತು ಅಪಹರಣಕಾರ ಪಲ್ಸರ್ ಸುನೀಲ್ ಪರಸ್ಪರ ಗೆಳೆಯರಾಗಿದ್ದರು ಎಂದು ಮಲಯಾಳಂ ನಟ ದಿಲೀಪ್ ಹೇಳಿದ್ದಾರೆ. ಗೋವಾದಲ್ಲಿ ಜೊತೆಯಲ್ಲಿ ಅವರು ಕೆಲಸ ಮಾಡಿದ್ದು, ಸ್ನೇಹಿತರಾಗಿದ್ದರು ಎಂದು ನಟ ಹಾಗೂ ನಿರ್ದೇಶಕ ಲಾಲ್ ತನ್ನಲ್ಲಿ ಹೇಳಿದ್ದಾರೆ ಎಂದು ದಿಲೀಪ್ ತಿಳಿಸಿದ್ದಾರೆ. ನಿಕೇಶ್‌ಕುಮಾರ್ ಶೋದಲ್ಲಿ ಮಾತಾಡುವ ವೇಳೆ ದಿಲೀಪ್ ಈವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ.
ಈ ಆತ್ಮೀಯತೆಯೇ ಅಪಾಯಕ್ಕೆ ಅವಕಾಶ ಒದಗಿಸಿದೆ ಎಂದು ದಿಲೀಪ್ ಹೇಳಿದರು. ತಾನು ಯಾರೊಂದಿಗೆ ಸೇರಬೇಕು ಎನ್ನುವುದನ್ನು ಅವರವರೇ ತೀರ್ಮಾನಿಸಬೇಕಾಗಿದೆ. ತಾನು ಯಾವತ್ತೂ ಇಂತಹ ಜನರೊಂದಿಗೆ ಗೆಳೆತನ ಹೊಂದಲು ಬಯಸುವುದಿಲ್ಲ ಎಂದು ದಿಲೀಪ್ ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ಹೆಚ್ಚು ಗಮನಹರಿಸುವ ವ್ಯಕ್ತಿಕೂಡಾ ತಾನು. ನಟಿಗೆ ಅಪಾಯ ಆಗಿದ್ದರಲ್ಲಿ ನೋವಿದೆ. ಆದರೆ ತನ್ನ ತೇಜೊವಧೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇನೆ ಎಂದು ದಿಲೀಪ್ ಹೇಳಿದರು.
"ಪಲ್ಸರ್ ಸುನಿ(ಸುನೀಲ್)ಯನ್ನು ನನ್ನ ನೆನಪಿನಂತೆ ನೋಡಿಲ್ಲ. ನಾನಿರುವಲ್ಲಿ ಯಾರೂ ಕೂಡಾ ನೋಡಿಲ್ಲ. ತನ್ನ ಜೊತೆ ಕೆಲಸಮಾಡುತ್ತಿರುವವರು ನೋಡಿಲ್ಲ. ನನ್ನ ಇಮೇಜ್‌ಗೆ ಕಳಂಕವೊಡ್ಡಲು ಸಂಚು ಈಗ ನಡೆಯುತ್ತಿದೆ" ಎಂದು ದಿಲೀಪ್ ಹೇಳಿದರು.