×
Ad

ಮರ್ಮಾಂಗ ಕತ್ತರಿಸಿದ ಘಟನೆ: ಯುವತಿಗೆ ಪುನಃ ಕೋರ್ಟಿನಿಂದ ನೋಟಿಸ್

Update: 2017-06-27 17:00 IST

ತಿರುವನಂತಪುರಂ,ಜೂ. 27: ಸ್ವಾಮಿ ಗಂಗೇಶಾನಂದ ಎಂಬವರ ಮರ್ಮಾಂಗ ಕತ್ತರಿಸಿದ ಘಟನೆಯಲ್ಲಿ ಯುವತಿಗೆ ಪುನಃ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಸುಳ್ಳುಪತ್ತೆ ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್‌ಗೆ ಹಾಜರಾಗುವ ಕುರಿತು ತನ್ನ ನಿಲುವನ್ನು ನೇರವಾಗಿ ಕೋರ್ಟಿನಲ್ಲಿ ಹಾಜರಾಗಿ ತಿಳಿಸಬೇಕೆಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಈವಿಷಯದಲ್ಲಿ ಕೋರ್ಟಿಗೆ ಬರುವಂತೆ ಈ ಹಿಂದೆ ಕೋರ್ಟ್ ತಿಳಿಸಿತ್ತು. ಆದರೆ ಯುವತಿ ಕೋರ್ಟಿಗೆ ಹಾಜರಾಗಿರಲಿಲ್ಲ. ಆದ್ದರಿಂದ ಕೋರ್ಟ್ ಪುನಃ ನೋಟಿಸು ಕಳುಹಿಸಿದೆ.

ಗಂಗೇಶಾನಂದ ನಿರಂತರ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮೊದಲು ಹೇಳಿಕೆ ನೀಡಿದ್ದ ಯುವತಿ ನಂತರ ಅದನ್ನು ಬದಲಿಸಿ ಹೇಳಿದ್ದಳು. ಗೆಳೆಯ ಎಂದು ಮೊದಲು ಹೇಳಿದ್ದ ಅಯ್ಯಪ್ಪದಾಸ್ ತನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿ ಅತ್ಯಾಚಾರ ವೆಸಗಿದ್ದಾನೆಂದು ನಂತರ ಯುವತಿ ದೂರು ನೀಡಿದ್ದಳು. ತನ್ನ ಕುಟುಂಬ ಮತ್ತು ಗಂಗೇಶಾನಂದನ ಹಣವನ್ನು ಅಯ್ಯಪ್ಪದಾಸ್ ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಳು. ಆದ್ದರಿಂದ ಹೇಳಿಕೆಯ ಸತ್ಯಾಸತ್ಯತೆಯನ್ನು ಅರಿತುಕೊಳ್ಳಲು ಯುವತಿಯನ್ನು ಸುಳ್ಳುಪತ್ತೆ ಪರೀಕ್ಷೆಗೆ ಗುರಿಪಡಿಸಬೇಕೆಂದು ಪೊಲೀಸರು ಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದಾರೆ. ಕೋರ್ಟ್ ಇದಕ್ಕೆ ಅನುಮತಿ ನೀಡಿದೆ.

ಆದರೆ ಯುವತಿಯ ಅನುಮತಿಯಿಂದ ಮಾತ್ರ ಸುಳ್ಳುಪತ್ತೆ ಪರೀಕ್ಷೆ ನಡೆಸಲು ಸಾಧ್ಯವಿದೆ. ಆದ್ದರಿಂದ  ನೇರವಾಗಿ ಹಾಜರಾಗಿ ತನ್ನ ನಿಲುವನ್ನು ತಿಳಿಸುವಂತೆ ಕೋರ್ಟ್ ಯುವತಿಗೆ ನೋಟಿಸು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News