ಮತ್ತೆ ಲೋಕನಾಥ್ ಬೆಹ್ರಾ ಕೇರಳ ಡಿಜಿಪಿ

Update: 2017-06-28 08:26 GMT

ತಿರುವನಂತಪುರಂ,ಜೂ. 28: ಡಿಜಿಪಿ ಲೋಕನಾಥ್ ಬೆಹ್ರಾ ಪುನಃ ರಾಜ್ಯದ ಪೊಲೀಸ್ ಮುಖ್ಯಸ್ಥರನ್ನಾಗಿ ನೇಮಿಸಲು ಸರಕಾರ ತೀರ್ಮಾನಿಸಿದೆ. ಟಿ.ಪಿ.ಸೇನ್ ಕುಮಾರ್ ನಿವೃತ್ತರಾಗುವ ಹಿನ್ನೆಲೆಯಲ್ಲಿ ಖಾಲಿಯಾದ ಸ್ಥಾನಕ್ಕೆ ಲೋಕನಾಥ್ ಬೆಹ್ರಾ ಡಿಜಿಪಿಯಾಗಿ ಬರಲಿದ್ದಾರೆ. ಜೂನ್ 30ಕ್ಕೆ ಸೇನ್ ಕುಮಾರ್ ನಿವೃತ್ತರಾಗುತ್ತಿದ್ದು, ಜೇಕಬ್ ಥಾಮಸ್ ಸೇವಾ ಹಿರಿತನದ ವ್ಯಕ್ತಿಯಾದರೂ ಸಚಿವಸಂಪುಟ ಸಭೆಯಲ್ಲಿ ಬೆಹ್ರಾರನ್ನು ಡಿಜಿಪಿ ಸ್ಥಾನಕ್ಕೆ ಆಯ್ಕೆಮಾಡಲಾಗಿದೆ.

ಸರಕಾರದ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆ ಸಮಿತಿಯ ಶಿಫಾರಸ್ಸನ್ನು ಸಚಿಸಂಪುಟ ಸಭೆ ಸೇರಿ ಅಂಗೀಕರಿಸಿದೆ ಕೆಲಸವನ್ನುಮಾಡಿದೆ. ಈಗ ಬೆಹ್ರಾ ವಿಜಿಲೆನ್ಸ್ ನಿರ್ದೇಶಕರಾಗಿದ್ದಾರೆ. 1985 ಬ್ಯಾಚ್‌ನ ಕೇರಳ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಬೆಹ್ರಾ ಒಡಿಸ್ಸಾದವರು. ಕೊಚ್ಚಿತಿರುವನಂತಪುರಂನಲ್ಲಿ ಪೊಲೀಸ್ ಕಮಿಶನರ್ ಆಗಿ. ಸಿಬಿಐಯಲಿ ಎಸ್ಪಿ, ಡಿಐಜಿಯಾಗಿ ಕೆಲಸ ಮಾಡಿದ್ದಾರೆ. 2016ರಲ್ಲಿ ಪಿಣರಾಯಿ ಸರಕಾರ ಅಧಿಕಾರಕ್ಕೆ ಬಂದಕೂಡಲೇ ಬೆಹ್ರಾರನ್ನು ಡಿಐಜಿಯಾಗಿ ಆಗಿನೇಮಕಗೊಳಿಸಿದ್ದರು. ಇದನ್ನು ಕೋರ್ಟಿನಲ್ಲಿ ಪ್ರಶ್ನಿಸಿದ ಸೇನ್ ಕುಮಾರ್ ಸುಪ್ರೀಂಕೋರ್ಟು ಮುಖಾಂತರ ಪುನಃ ಡಿಐಜಿಯಾಗಿ ನೇಮಕವಾಗಿದ್ದರು. ಬೆಹ್ರಾರನ್ನು ವಿಜಿಲೆನ್ಸ್ ಮುಖ್ಯಸ್ಥರಾಗಿ ನೇಮಕಗೊಳಿಸಲಾಯಿತು. ಸರಕಾರದ ತೀರ್ಮಾನಕ್ಕೆ ಬೆಹ್ರಾ ಕೃತಜ್ಞತೆ ಸೂಚಿಸಿದ್ದಾರೆ.ಅಧಿಕೃತ ಸೂಚನೆ ತನಗೆ ಲಭಿಸಿಲ್ಲ ಎಂದ ಬೆಹ್ರಾ, ಪೊಲೀಸ್ ಮುಖ್ಯಸ್ಥನಾದರೆ ಈಗಿನ ಕೇಸುಗಳ ತನಿಖೆಗೆ ಆದ್ಯತೆ ನೀಡುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News