×
Ad

ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ದೋಷಿ ಮುಸ್ತಫಾ ದೋಸ್ಸಾ ಮೃತ್ಯು

Update: 2017-06-28 14:23 IST

ಮುಂಬೈ, ಜೂ.28: ಮುಂಬೈಯಲ್ಲಿ 1993ರಲ್ಲಿ  ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿದ್ದ  ಪ್ರಮುಖ ಅಪರಾಧಿಗಳಲ್ಲಿ ಒಬ್ಬನಾಗಿರುವ ಮುಸ್ತಫಾ ದೋಸ್ಸಾ ಅನಾರೋಗ್ಯದಿಂದಾಗಿ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಜ್ವರ, ಅನಿಯಂತ್ರಿತ ಮಧುಮೇಹ ಮತ್ತು ರಕ್ತದೊತ್ತಡ ಕಾರಣದಿಂದಾಗಿ ಮುಸ್ತಫಾನನ್ನು ಇಂದು ಬೆಳಗ್ಗೆ  ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

 ಮುಸ್ತಫಾ ದೋಸ್ಸಾನನ್ನು  ಮುಂಬೈ ಸ್ಫೋಟ ಪ್ರಕರಣದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಇಳಿಸುವ ವ್ಯವಸ್ಥೆ ಮತ್ತು ಪಿತೂರಿಯಲ್ಲಿ ಭಾಗವಹಿಸಿದ ಆರೋಪದಲ್ಲಿ 2003, ಮಾರ್ಚ್ 20ರಂದು ಯುಎಇಯಲ್ಲಿ ಬಂಧಿಸಿ ಭಾರತಕ್ಕೆ  ಕರೆತರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News