×
Ad

​ಹರಿಯಾಣ ಸರಕಾರದ ನಿಯತಕಾಲಿಕದಲ್ಲಿ ಅವಕುಂಠನ ಧರಿಸಿದ ಮಹಿಳೆ: ವಿವಾದ

Update: 2017-06-28 23:01 IST

ಚಂಡಿಗಢ, ಜೂ. 28: ಹರಿಯಾಣ ಸರಕಾರದ ಮ್ಯಾಗಝಿನ್‌ನಲ್ಲಿ ಫೋಟೋ ಒಂದಕ್ಕೆ ಗೂನ್‌ಘಾಟ್ (ಅವಕುಂಠನ) ನಮ್ಮ ರಾಜ್ಯದ ಗುರುತು ಎಂದು ವಿವರಿಸಿ ಚಿತ್ರ ಶೀರ್ಷಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಇದು ಬಿಜೆಪಿಯ ಪ್ರತಿಗಾಮಿತನದ ಮನಸ್ಥಿತಿ ಪ್ರತಿಬಿಂಬಿಸುತ್ತದೆ ಎಂದು ವಿರೋಧ ಪಕ್ಷ ಹೇಳಿದೆ. ವಿರೋಧ ಪಕ್ಷದ ಆರೋಪವನ್ನು ಸಚಿವ ಅನಿಲ್ ವಿಜ್ ತಳ್ಳಿ ಹಾಕಿದ್ದಾರೆ. ಬಿಜೆಪಿ ಸರಕಾರ ಮಹಿಳೆಯರಿಗಾಗಿ ಅನೇಕ ಸಬಲೀಕರಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಹರಿಯಾಣ ಸರಕಾರ ತಿಂಗಳ ನಿಯತಕಾಲಿಕ ಸಂವೇದದ ಇತ್ತೀಚೆಗಿನ ಪುರವಣಿ ಕೃಷಿ ಸಂವಾದದಲ್ಲಿ ಅವಕುಂಠನ ಧರಿಸಿದ ಮಹಿಳೆಯ ಛಾಯಾಚಿತ್ರ ಪ್ರಕಟಿಸಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News