ಉವೈಸಿ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಅಪರಾಧ ಸಾಬೀತು

Update: 2017-06-29 13:52 GMT

ಹೈದರಾಬಾದ್, ಜೂ.29: ಎಎಂಐಎಂ ಶಾಸಕ ಅಕ್ಬರುದ್ದೀನ್ ಉವೈಸಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಾಲ್ವರನ್ನು ಅಪರಾಧಿಗಳೆಂದು ಸ್ಥಳೀಯ ನ್ಯಾಯಾಲಯವೊಂದು ತೀರ್ಪು ನೀಡಿದೆ.

ಅದಾಗ್ಯೂ, ಪ್ರಮುಖ ಆರೋಪಿ ಮುಹಮ್ಮದ್ ಬಿನ್ ಒಮರ್ ಯಫಾಯ್ (ಮುಹಮ್ಮದ್ ಪಹಲ್ವಾನ್) ಹಾಗೂ ಇತರ 9 ಮಂದಿಯನ್ನು ನ್ಯಾಯಾಲಯ ದೋಷಮುಕ್ತಿಗೊಳಿಸಿದೆ. ಎಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿಯ ಸೋದರಾಗಿರುವ ಅಕ್ಬರುದ್ದೀನ್ ಉವೈಸಿ ಮೇಲೆ 2011ರ ಎಪ್ರಿಲ್ 30ರಂದು ಹೈದರಾಬಾದ್ ಹಳೆಯ ನಗರದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು.

 ಈ ಸಂದರ್ಭ ಉವೈಸಿ ಜೊತೆಯಿದ್ದ ಮತ್ತೋರ್ವ ಎಎಂಐಎಂ ಶಾಸಕ ಅಹ್ಮದ್ ಬಲಾಲ ಅವರ ಅಂಗರಕ್ಷಕ ಹಾರಿಸಿದ ಗುಂಡಿಗೆ ಹಲ್ಲೆಕೋರರ ಗುಂಪಿನ ಇಬ್ರಾಹಿಂ ಬಿನ್ ಯೂನಸ್ ಯಫಾಯಿ ಎಂಬಾತ ಬಲಿಯಾಗಿದ್ದ.

ಪ್ರಕರಣದಲ್ಲಿ ಒಟ್ಟು 14 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಇವರಲ್ಲಿ ನಾಲ್ವರನ್ನು ಅಪರಾಧಿಗಳೆಂದು ತೀರ್ಪು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News